janadhvani

Kannada Online News Paper

ಯುಎಇ: ಪಿಸಿಆರ್ ಟೆಸ್ಟ್ ಶುಲ್ಕ ಕಡಿತ- ವಿದ್ಯಾರ್ಥಿಗಳಿಗೆ ಉಚಿತ

ಅಬುಧಾಬಿ: ಯುಎಇದಾದ್ಯಂತ ಪಿಸಿಆರ್ ಪರೀಕ್ಷೆಯ ದರವನ್ನು ಕಡಿತಗೊಳಿಸಲಾಗಿದೆ. ಇಂದಿನಿಂದ, ಕೋವಿಡ್ ಪರೀಕ್ಷೆಗೆ 50 ದಿರ್ಹಮ್ ಶುಲ್ಕ ವಿಧಿಸಲಾಗುತ್ತದೆ. ಅಬುಧಾಬಿ ಆರೋಗ್ಯ ಸೇವೆಗಳ ಕಂಪನಿ (ಎಸ್‌ಇಎಚ್‌ಎ) ಶಾಲಾ ಆರಂಭದ ಹಿನ್ನೆಲೆಯಲ್ಲಿ ಆಯ್ದ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ತಪಾಸಣೆ ನಡೆಸಲಾಗುವುದು ಎಂದು ಘೋಷಿಸಿದೆ.

ರಾಷ್ಟ್ರೀಯ ತುರ್ತುಸ್ಥಿತಿ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ (NEMA) ದೇಶದ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಕೋವಿಡ್ ಪರೀಕ್ಷೆಗಾಗಿ ಹೊಸ ಏಕರೂಪದ ದರವನ್ನು ಘೋಷಿಸಿದೆ. ಪರೀಕ್ಷಾ ಫಲಿತಾಂಶಗಳನ್ನು 24 ಗಂಟೆಗಳಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ. ಹೊಸ ದರಗಳು ಆಗಸ್ಟ್ 31 ರಿಂದ ಜಾರಿಗೆ ಬರಲಿವೆ.

ಸೆಹಾ, ಅಬುಧಾಬಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುವುದು. ವಿದ್ಯಾರ್ಥಿಗಳು ಶಾಲೆಗಳಿಗೆ ಮರಳುವುದನ್ನು ಖಾತರಿಪಡಿಸುವುದು ಇದರ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಚಿತ ತಪಾಸಣೆಯು ಸೆಪ್ಟೆಂಬರ್ 30 ರವರೆಗೆ ಇರಲಿದೆ.

ಸೆಹಾ ಸ್ಕ್ರೀನಿಂಗ್ ಕೇಂದ್ರಗಳು ಶನಿವಾರದಿಂದ ಗುರುವಾರ ತನಕ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಮತ್ತು ಶುಕ್ರವಾರ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ. ಮುಂಗಡವಾಗಿ ದಾಖಲಿಸದೆ, ವಿದ್ಯಾರ್ಥಿಗಳು ನೇರವಾಗಿ ಪರೀಕ್ಷೆಗೆ ಆಗಮಿಸಬಹುದು.

ವಿವಿಧ ಎಮಿರೇಟ್‌ಗಳಲ್ಲಿನ ಪರೀಕ್ಷಾ ಕೇಂದ್ರಗಳು

ಅಬುಧಾಬಿ

  • Seha Drive-Through Screening Centre-Zayed Sports City
  • Seha Drive-Through Screening Centre-Al Bahia
  • Seha Drive-Through Screening Centre-Al Manhal, Abu Dhabi
  • Seha Drive-Through Screening Centre-Al Shamkha, Abu Dhabi

ಅಲ್ಐನ್

  • Seha Drive-Through Screening Centre-Asharej
  • Seha Drive-Through Screening Centre-Al Hili
  • Seha Drive-Through Screening Centre-Al Sarouj, Al Ain
  • Seha Drive-Through Screening Centre-Al Aamerah

ಅಲ್ ದಫ್ರಾ

  • Seha Drive-Through Screening Centre-Ghayathi
  • Seha Drive-Through Screening Centre-Liwa
  • Seha Drive-Through Screening Centre-Delma
  • Seha Drive-Through Screening Centre–Madinat Zayed
  • Seha Drive-Through Screening Centre–Al Mifra
  • Seha Drive-Through Screening Centre–Al Sila

ದುಬೈ

  • National Screening Centre-Mina Rashed
  • National Screening Centre-City Walk, Dubai
  • National Screening Centre-Al Khawaneej

ಶಾರ್ಜಾ/ಉಮ್ಮುಲ್ ಖುವೈನ್

  • National Screening Centre-Sharjah
  • National Screening Centre-Umm Al Quwain

ಅಜ್ಮಾನ್

  • National Screening Centre-Ajman

ರಾಸಲ್ ಖೈಮಾ

  • National Screening Centre-Ras Al Khaimah