janadhvani

Kannada Online News Paper

ಕೆಸಿಎಫ್ ನಿಂದ ಪ್ರಳಯ ಸಂತ್ರಸ್ತರಿಗೆ ನಿರ್ಮಿಸಿದ ಮನೆಗಳ ಹಸ್ತಾಂತರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ‌ಘಟಿಸಿದ ಪ್ರಳಯದಿಂದ ಮನೆಗಳನ್ನು ಕಳೆದುಕೊಂಡು ಅತಂತ್ರರಾದ ವಿಭಿನ್ನ ಜನಾಂಗದ ನಿರ್ಗತಿಕರಿಗಾಗಿ ಕೆಸಿಎಫ್ ಮುಂದಾಳತ್ವದಲ್ಲಿ ನಿರ್ಮಾಣ ಪೂರ್ಣಗೊಂಡ ಮನೆಗಳ ಹಸ್ತಾಂತರ ಕಾರ್ಯಕ್ರಮವನ್ನು ಆಗಸ್ಟ್ 23 ಸೋಮವಾರ ಬೆಳಗ್ಗೆ 9:30 ಕ್ಕೆ ಶೈಖುನಾ ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದ್ ಆನ್ಲೈನ್ ಮೂಲಕ ನಿರ್ವಹಿಸಲಿದ್ದಾರೆ.

2018 ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ‌ಘಟಿಸಿದ ಪ್ರಳಯದಿಂದ ಮನೆಗಳನ್ನು ಕಳೆದು ಅತಂತ್ರರಾದ ವಿಭಿನ್ನ ಜನಾಂಗದ ನಿರ್ಗತಿಕರ ಪೈಕಿ ಕನಿಷ್ಠ 10 ಮಂದಿಗೆ ಮನೆ ನಿರ್ಮಾಣಕ್ಕೆ ಇಂಡ್ಯನ್ ಗ್ರಾಂಡ್ ಮುಫ್ತಿ, ಕೊಡಗಿನ ಖಾಝಿ ಸುಲ್ತಾನುಲ್ ಉಲಮಾ ಶೈಖುನಾ ಸುಲ್ತಾನುಲ್ ಉಲಮಾ ಎ,ಪಿ, ಉಸ್ತಾದರು ಆದೇಶ ಪಾಲನೆಗಾಗಿ ಎಸ್ ವೈ ಎಸ್,ರಾಜ್ಯ ಸಮಿತಿ ವತಿಯಿಂದ ಖಾಸಗಿ ಸ್ಥಳ ಖರೀದಿಸಿ ಅದರಲ್ಲಿ 10ಮನೆಯ ನಿರ್ಮಾಣದ ಗುರಿ ಇಡಲಾಗಿತ್ತು.

ಏತನ್ಮದ್ಯೆ ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯರೂ, ಕೊಡಗು ಮುಸ್ಲಿಂ ಜಮಾಅತ್ ಕೋಶಾಧಿಕಾರಿ ಕೊಡುಗೈ ದಾನಿ ಅಬ್ದುಲ್ ಲತೀಫ್ ಸುಂಟಿಕೊಪ್ಪ ರವರು ಲಕ್ಷಾಂತರ ರೂಪಾಯಿ ಮೌಲ್ಯದ ತಮ್ಮ ಅಮೂಲ್ಯ ಒಂದು ಎಕರೆ ಜಮೀನನ್ನು ಪ್ರಳಯ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಉದಾರವಾಗಿ ಎಸ್ ವೈ ಎಸ್ ಸಮಿತಿಗೆ ನೀಡಿದರು.

ಆ ಸ್ಥಳದಲ್ಲಿ ಈಗಾಗಲೇ ಎಸ್ ವೈ ಎಸ್ ರಾಜ್ಯ ಸಮಿತಿ ವತಿಯಿಂದ ವಿಭಿನ್ನ ಜನಾಂಗದ ಅರ್ಹ 16 ಪಲಾನುಭವಿಗಳಿಗೆ ಮನೆ ನಿರ್ಮಿಸಿಲು ಬೇಕಾದ ಸ್ಥಳಗಳು ಆಯ್ದ ಸಂತ್ರಸ್ತರ ಹೆಸರಿಗೆ ನೋಂದಾಯಿಸಿಲಾಗಿತ್ತು. ಪ್ರಸ್ತುತ ಸ್ಥಳದಲ್ಲಿ ಅನಿವಾಸಿ ಕನ್ನಡಿಗರ ಒಕ್ಕೂಟ ಕರ್ನಾಟಕ ಕಲ್ಚರಲ್ ಫೌಂಡೇಶನ್,ಕೆ,ಸಿ,ಎಫ್, ಮುಂದಾಳತ್ವದಲ್ಲಿ
ಮೂರು ಸಂತ್ರಸ್ತರಿಗೆ ನಿರ್ಮಿಸಿದ ಮನೆಯ ಕಾಮಗಾರಿ ಪೂರ್ಣ ಗೊಂಡಿದ್ದು ಫಲಾನಬಾವಿಗಳಿಗೆ ಹಸ್ತಾಂತರ ಮಾಡಲು ಸಿದ್ದ ವಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೂರ್ಗ್ ಜಂಇಯತುಲ್ ಉಲಮಾದ ಅಧ್ಯಕ್ಷ ರಾದ ಶೈಖುನಾ ಮಹ್ಮೂದ್ ಉಸ್ತಾದ್, ಮಡಿಕೇರಿ ಶಾಸಕ ಎಂ,ಪಿ, ಅಪ್ಪಚ್ಚು ರಂಜನ್, ಹಾಜಿಶೈಖ್ ಭಾವ ಮಂಗಳೂರು, ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದರೂಸಿ ಎಮ್ಮೆಮಾಡು. ಅಬ್ದುಲ್ಲ ಸಖಾಫಿ ಕೊಳಕೇರಿ. ಶಾಫಿ ಸಹದಿ ಸೋಮವಾರ ಪೇಟೆ. ಮುಸ್ತಫಾ ಸಖಾಫಿ ಹುಂಡಿ. ಸೇರಿದಂತೆ ಜಿಲ್ಲೆಯ ಸಾಂಘಿಕ ರಂಗದ ಸಾರಥಿಗಳು‌
ಭಾಗವಹಿಸಲಿದ್ದಾರೆಂದು ಕೆ, ಸಿ, ಎಫ್, UAE ಅಧ್ಯಕ್ಷರಾದ ಅಬ್ದಲ್ ಜಲೀಲ್ ನಿಝಾಮಿ ಎಮ್ಮೆಮಾಡು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ
.ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತಿ:-
1. ಅಬ್ದುಲ್ ಲತೀಫ್ ಸುಂಟಿಕೊಪ್ಪ (ಕೊಶಾಧಿಕಾರಿ ಮುಸ್ಲಿಂ ಜಮಾಅತ್)
2.ಅಬ್ದುಲ್ ಹಫೀಳ್ ಕೊಳಕೇರಿ ಸಹದಿ.
(ಮೀಡಿಯಾ ಸೆಕ್ರೆಟರಿ ಎಸ್ ವ್ಯ ಎಸ್ ಕರ್ನಾಟಕ)
3.ಪಿ. ಎ ಯೂಸುಫ್ ಕೊಂಡಂಗೇರಿ
(ವರ್ಕಿಂಗ್ ಪ್ರಸಿಡೆಂಟ್ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲೆ)
4.ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ವೆಲ್ಫೇರ್ (ಕಾರ್ಯದರ್ಶಿ ಕೆ ಸಿ ಎಫ್ ಇಂಟರ್ ನೇಷನಲ್ ಸಮಿತಿ)
5. ಅಬ್ದುಲ್ಲ ಸಖಾಫಿ ಕೊಳಕೇರಿ
(ಅದ್ಯಕ್ಷರು ಎಸ್ ವ್ಯ ಎಸ್ ಕೊಡಗು)

error: Content is protected !! Not allowed copy content from janadhvani.com