janadhvani

Kannada Online News Paper

ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ :ಅರ್ಧ ವಾರ್ಷಿಕ ಸಭೆ

ಪಳ್ಳಿಮಜಲು: ಎಸ್.ಎಸ್.ಎಫ್ ಬೆಳ್ಳಾರೆ ಸೆಕ್ಟರ್ ಇದರ ಅರ್ಧ ವಾರ್ಷಿಕ ಸಭೆಯು ದಿನಾಂಕ 19/08/2021 ಗುರುವಾರ ರಾತ್ರಿ ಪಳ್ಳಿಮಜಲಿನಲ್ಲಿ ಸೆಕ್ಟರ್ ಅಧ್ಯಕ್ಷರಾದ ರಫೀಖ್ ಅಂಜದಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸ್ಥಳೀಯ ಖತೀಬರಾದ ರಾಶಿದ್ ಅಹ್ಸನಿ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸೆಕ್ಟರ್ ಕಾರ್ಯದರ್ಶಿ ರಿಯಾನ್ ಸಹದಿ ಸ್ವಾಗತ ಭಾಷಣ ಮಾಡಿದರು.

ಎಸ್.ಎಮ್.ಎ ಬೆಳ್ಳಾರೆ ಝೋನ್ ನೂತನ ಅಧ್ಯಕ್ಷರಾದ ಇಬ್ರಾಹಿಂ ಪಳ್ಳಿಮಜಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ತದನಂತರ 2021 ನೇ ಸಾಲಿನ ವರದಿಯನ್ನು ಸೆಕ್ಟರ್ ಕಾರ್ಯದರ್ಶಿಗಳಲ್ಲೋರ್ವರಾದ ಶಮ್ಮಾಸ್ ಸಹದಿ ವಾಚಿಸಿದರು.ಲೆಕ್ಕಪತ್ರ ಮಂಡನೆಯನ್ನು ರಿಯಾನ್ ಸಹದಿ ಸಭೆಯ ಮುಂದಿಟ್ಟರು.ಕೆಲವು ತಿದ್ದುಪಡಿಗಳ ಬಳಿಕ ಸಭೆಯಲ್ಲಿ ಅಂಗೀಕರಿಸಲಾಯಿತು.ಸುಳ್ಯ ಡಿವಿಷನ್ ಅಧ್ಯಕ್ಷರಾದ ಫೈಝಲ್ ಝುಹ್ರಿ ಅರ್ಥಗರ್ಭಿತವಾದ ಮಾತುಗಳಿಂದ ನಮ್ಮ ನೈಜ ಆದರ್ಶದ ಕುರಿತು ಕಾರ್ಯಕರ್ತರ ಮನಮುಟ್ಟುವಂತೆ ತರಗತಿ ನಡೆಸಿದರು.

ಡಿವಿಶನ್ ನಾಯಕರಾದ ಸ್ವಭಾಹ್ ಹಿಮಮಿ ಸಂಘಟನಾ ಕಾರ್ಯಕರ್ತರಲ್ಲಿರಬೇಕಾದ ಗುಣನಡತೆಗಳ ಬಗ್ಗೆ ಸವಿವರವಾಗಿ ವಿವರಿಸಿ ಶುಭಹಾರೈಸಿದರು.ಸೆಕ್ಟರ್ ಉಸ್ತುವಾರಿಗಳೂ,ಡಿವಿಶನ್ ನಾಯಕರೂ ಆದ ನೌಷಾದ್ ಕೆರೆಮೂಲೆ ವೀಕ್ಷಕರಾಗಿ ಕಾರ್ಯ ನಿರ್ವಹಿಸಿದರು .ಸೆಕ್ಟರ್ ಸಮಿತಿಯ ಹೊಸ ಕೋಶಾಧಿಕಾರಿಯಾಗಿ ಆಸಿಫ್ ಬೀಡು ಪಳ್ಳಿಮಜಲ್ ,ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೌಷಾದ್ ಅಹ್ಸನಿ ಬೆಳ್ಳಾರೆಯವರನ್ನೂ ಆಯ್ಕೆ ಮಾಡಲಾಯಿತು.ಬಳಿಕ ಅಗಲಿದ ಸುನ್ನೀ ಕಾರ್ರ‌ಯಕರ್ತರ ಹೆಸರಲ್ಲಿ ಖುರ್ಆನ್ ಪಠಿಸಿ,ತಹ್ಲೀಲ್ ಸಮರ್ಪಿಸಿ ದುಆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ.ಡಿವಿಶನ್ ನಾಯಕರಾದ ಶಮೀರ್ ಡಿ ಎಚ್,ಸಿದ್ದೀಕ್ ಎಲಿಮಲೆ, ಮುನೀರ್ ಹನೀಫಿ,ಎಸ್.ವೈ.ಎಸ್ ಜಿಲ್ಲಾ ಸದಸ್ಯರಾದ ಸಂಶುದ್ದೀನ್ ಝಂ.ಝಂ,ಎಸ್.ವೈ.ಎಸ್ ಬೆಳ್ಳಾರೆ ಸೆಂಟರ್ ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಸೆಲೆಕ್ಟ್,ಎಸ್.ವೈ.ಎಸ್ ಪಳ್ಳಿಮಜಲ್ ಬ್ರಾಂಚ್ ಅಧ್ಯಕ್ಷರಾದ ಅಶ್ರಫ್ ನೇಲ್ಯಮಜಲ್ ಮುಂತಾದ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.5 ಯುನಿಟ್ಗಳಿಂದ ಹಲವಾರು ಕಾರ್ಯಕರ್ತರು ಕೌನ್ಸಿರಲರ್ಗಳಾಗಿ ಆಗಮಿಸಿದರು.
ಕೊನೆಯಲ್ಲಿ ಕಲಾ ಝುಹ್ರಿ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com