ಕುವೈತ್ ಸಿಟಿ : ಕುವೈತ್ ಭಾರತೀಯ ಪ್ರಯಾಣಿಕರ ಮೇಲಿನ ನಿರ್ಬಂಧವನ್ನು ತೆರವುಗೂಳಿಸಲಾಗಿದ್ದು, ಆಗಸ್ಟ್ 22 ರಿಂದ ನೇರವಾಗಿ ಕುವೈತ್‌ಗೆ ಪ್ರಯಾಣಿಸಬಹುದು. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕುವೈತ್-ಅನುಮೋದಿತ ಲಸಿಕೆ ಪಡೆದ ರೆಸಿಡೆನ್ಸಿ ವಿಸಾ ಹೊಂದಿರುವವರಿಗೆ ಪ್ರವೇಶಾನುಮತಿ ನೀಡಲಾಗುವುದು. ಫೈಜರ್, ಕೋವ್‌ಶೀಲ್ಡ್, ಮೊಡೆನಾ, ಜಾನ್ಸನ್ ಮತ್ತು ಜಾನ್ಸನ್ ಲಸಿಕೆಗಳನ್ನು ಕುವೈತ್‌ನಲ್ಲಿ ಅನುಮೋದಿಸಲಾಗಿದೆ.
ಕುವೈತ್ ಅನುಮೋದಿಸದ 2 ಡೋಸ್ ಲಸಿಕೆಯನ್ನು ಪಡೆದವರಿಗೆ ಮಾರ್ಗಸೂಚಿಗಳಿವೆ. ಈ ವರ್ಗದಲ್ಲಿರುವವರು ಕುವೈತ್ ಅನುಮೋದಿಸಿದ ಲಸಿಕೆಯನ್ನು ಮೂರನೇ ಡೋಸ್ ಆಗಿ ಪಡೆಯಬೇಕು.
ಭಾರತದಿಂದ ಲಸಿಕೆ ಪಡೆದವರು ಲಸಿಕೆ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು ಮತ್ತು ಕುವೈತ್ ಆರೋಗ್ಯ ಸಚಿವಾಲಯದಿಂದ ಅನುಮತಿ ಪಡೆಯಬೇಕು. 72 ಗಂಟೆಗಳ ಮುಂಚಿತವಾಗಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕೂಡ ಕಡ್ಡಾಯವಾಗಿದೆ.
ಬಾಂಗ್ಲಾದೇಶ, ಈಜಿಪ್ಟ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಪ್ರಯಾಣದ ನಿಷೇಧವನ್ನೂ ತೆಗೆದುಹಾಕಲಾಗಿದೆ. ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಕಾರಣ ಕಳೆದ ವರ್ಷ ಮಾರ್ಚ್‌ನಲ್ಲಿ ಕುವೈತ್‌ಗೆ ಪ್ರಯಾಣವನ್ನು ನಿಷೇಧಿಸಲಾಗಿತ್ತು.