ರಿಯಾದ್:ವಲಸಿಗರಿಗೆ ಮತ್ತೆ ದಯೆ ತೋರಿದ ಸೌದಿ ದೊರೆ ಸಲ್ಮಾನ್. ಭಾರತ ಸೇರಿದಂತೆ ಸೌದಿಗೆ ಪ್ರವೇಶ ನಿರ್ಬಂಧವಿರುವ ದೇಶಗಳ ವಲಸಿಗರಿಗೆ ಇಖಾಮ, ಮರು ಪ್ರವೇಶ ಮತ್ತು ಭೇಟಿ ವೀಸಾವನ್ನು ಉಚಿತವಾಗಿ ವಿಸ್ತರಿಸಲು ರಾಜ ಸಲ್ಮಾನ್ ಆದೇಶಿಸಿದ್ದಾರೆ. ಜವಾಝಾತ್ ನಿರ್ದೇಶನಾಲಯವು, ವಿದೇಶಿಯರ ಇಕಾಮ, ಮರು ಪ್ರವೇಶ ಮತ್ತು ಭೇಟಿ ವೀಸಾವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಘೋಷಿಸಿದೆ.
ಭಾರತ ಸೇರಿದಂತೆ ನಿಷೇಧಿತ ದೇಶಗಳಲ್ಲಿ ಸಿಲುಕಿರುವ ಸೌದಿ ವಲಸಿಗರ ಇಕಾಮ ಮತ್ತು ಮರು ಪ್ರವೇಶವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸುವಂತೆ ಈ ಹಿಂದೆ ರಾಜ ಸಲ್ಮಾನ್ ನಿರ್ದೇಶನ ನೀಡಿದ್ದರು. ಅದರಂತೆ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ ಯಾರೂ ಕಚೇರಿಗಳನ್ನು ಸಂಪರ್ಕಿಸಬೇಕಾಗಿಲ್ಲ ಮತ್ತು ನವೀಕರಣವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ಸ್ವಯಂಚಾಲಿತವಾಗಿ ಮಾಡಲಾಗುವುದು ಎಂದು ಜವಾಝಾತ್ ಹೇಳಿದೆ.
ಪ್ರಯಾಣದ ನಿರ್ಬಂಧಗಳನ್ನು ಹೊಂದಿರುವ ದೇಶಗಳಲ್ಲಿರುವ ವಲಸಿಗರ ಇಕಾಮಾ, ಮರು ಪ್ರವೇಶ ಮತ್ತು ಸಂದರ್ಶಕರ ವೀಸಾಗಳನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸುವಂತೆ ರಾಜರು ಈ ಹಿಂದೆ ನಿರ್ದೇಶನ ನೀಡಿದ್ದರು.