janadhvani

Kannada Online News Paper

ದುಬೈ ಪ್ರಯಾಣಿಕರ ರಾಪಿಡ್ ಟೆಸ್ಟ್ : ಸಮಯದಲ್ಲಿ ರಿಯಾಯ್ತಿ

ದುಬೈ: ದುಬೈಗೆ ಪ್ರಯಾಣಿಸಲು ರಾಪಿಡ್ ಪಿಸಿಆರ್ ಟೆಸ್ಟ್ ಸಮಯದಲ್ಲಿ ರಿಯಾಯಿತಿ ನೀಡಿದೆ. ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ (ಡಿಸಿಎಎ) ಆರು ಗಂಟೆಗಳ ಒಳಗೆ ಕ್ಷಿಪ್ರ ಪರೀಕ್ಷಾ ಫಲಿತಾಂಶಗಳು ಲಭ್ಯವಿರಬೇಕು ಎಂದು ಹೇಳಿದೆ. ಈ ಹಿಂದೆ ರಾಪಿಡ್ ಟೆಸ್ಟ್ ಸಮಯ ನಾಲ್ಕು ಗಂಟೆಗಳಾಗಿತ್ತು.

ಏತನ್ಮಧ್ಯೆ, ಅರ್ಮೇನಿಯಾ ಮತ್ತು ಮಾಲ್ಡೀವ್ಸ್ ಸೇರಿದಂತೆ ಯುಎಇಗೆ ಆಗಮಿಸಲು ಬಳಸುತ್ತಿದ್ದ ದೇಶಗಳನ್ನು ಅಬುಧಾಬಿ ಕೆಂಪು ಪಟ್ಟಿಗೆ ಸೇರಿಸಿದೆ.

ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ (ಡಿಸಿಎ) ಭಾರತ ಸೇರಿದಂತೆ ಆರು ದೇಶಗಳ ಜನರಿಗೆ ರಾಪಿಡ್ ತಪಾಸಣೆಯ ಸಮಯದಲ್ಲಿ ರಿಯಾಯಿತಿ ನೀಡಿದೆ. ನಾಲ್ಕು ಗಂಟೆಗಳ ಬದಲು, ಆರು ಗಂಟೆಗಳ ಒಳಗೆ ರಾಪಿಡ್ ಪಿಸಿಆರ್ ಪರೀಕ್ಷಾ ಫಲಿತಾಂಶಗಳನ್ನು ನೀಡಿದರೆ ಸಾಕು. ನಿರ್ಗಮನದ ನಾಲ್ಕು ಗಂಟೆಗಳಲ್ಲಿ ರಾಪಿಡ್ ಟೆಸ್ಟ್ ನಡೆಸಲು ವಿಮಾನ ನಿಲ್ದಾಣಗಳಲ್ಲಿ ಭಾರೀ ಜನದಟ್ಟಣೆ ಅನುಭವಿಸುತ್ತಿತ್ತು.

ಏತನ್ಮಧ್ಯೆ, ಅಬುಧಾಬಿ ತನ್ನ ಕೆಂಪು ಪಟ್ಟಿಗೆ ಆರು ದೇಶಗಳನ್ನು ಸೇರಿಸಿದೆ, ಇದರಲ್ಲಿ ಅರ್ಮೇನಿಯಾ ಮತ್ತು ಮಾಲ್ಡೀವ್ಸ್ ಸೇರಿದೆ. ಯುಎಇಗೆ ನೇರವಾಗಿ ಮರಳಲು ನಿರ್ಬಂಧವಿರುವ ದೇಶದವರು ಇದನ್ನು ಬೇಸ್ ಆಗಿ ಬಳಸುತ್ತಿದ್ದರು .

ಇಂದಿನಿಂದ ಈ ದೇಶಗಳಿಂದ ಆಗಮಿಸುವವರಿಗೆ ಏಳು ದಿನಗಳ ಕ್ಯಾರೆಂಟೈನ್ ಮತ್ತು ಲಸಿಕೆ ಹಾಕದವರಿಗೆ ಹತ್ತು ದಿನಗಳ ಕ್ವಾರಂಟೈನ್ ಕಡ್ಡಾಯ. ಗ್ರೀನ್ ಲಿಸ್ಟ್ ದೇಶಗಳಿಂದ ಬರುವವರಿಗೆಗೆ ಯಾವುದೇ ಕ್ವಾರಂಟೈನ್ ಇಲ್ಲ. ಯುಎಸ್, ಇಸ್ರೇಲ್, ಇಟಲಿ ಮತ್ತು ಆಸ್ಟ್ರಿಯಾ ಕೂಡ ಕೆಂಪು ಪಟ್ಟಿಯಲ್ಲಿವೆ.

error: Content is protected !! Not allowed copy content from janadhvani.com