janadhvani

Kannada Online News Paper

75ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಕೆಸಿಎಫ್ ಸೌದಿ ಅರೇಬಿಯಾದಿಂದ ವಿವಿಧ ಸ್ಥಳಗಳಲ್ಲಿ ನಡೆದ ರಕ್ತದಾನ ಶಿಬಿರ

ಭಾರತದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ವಿವಿಧ ಸ್ಥಳಗಳಲ್ಲಿ ಆಗಸ್ಟ್ 13ರಂದು ರಕ್ತದಾನ ಶಿಬಿರ ನಡೆಸಲಾಯಿತು.

ಅನಿವಾಸಿಗಳಾದ ಭಾರತೀಯರಿಗೆ ಈ ವರ್ಷದ ಸ್ವಾತಂತ್ರ್ಯ ದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಕೆಸಿಎಫ್ ಅವಕಾಶ ಮಾಡಿಕೊಟ್ಟಿದೆ.

ರಕ್ತದಾನ ಶಿಬಿರ, ಮಕ್ಕಳಿಗೆ ಚಿತ್ರ ರಚನೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹೀಗೆ ವಿಭಿನ್ನವಾದ ರೀತಿಯಲ್ಲಿ ಅವಕಾಶವನ್ನು ಮಾಡಿಕೊಟ್ಟಿದೆ.

ಇದರ ಭಾಗವಾಗಿ ಆಗಸ್ಟ್ 13ರಂದು ಸೌದಿ ಅರೇಬಿಯಾದ ಜಿದ್ದಾ, ದಮ್ಮಾಮ್, ಅಲ್-ಕೋಬಾರ್, ಜುಬೈಲ್ ಹಾಗೂ ಅಲ್’ಹಸ್ಸಾದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಒಂದೇ ದಿನದಲ್ಲಿ ವಿವಿಧ ಭಾಗಗಳಲ್ಲಾಗಿ 250ಕ್ಕೂ ಹೆಚ್ಚು ಯುನಿಟ್ ರಕ್ತಗಳನ್ನು ನೀಡಲಾಗಿದೆ.

ಕೆಸಿಎಫ್ ನಡೆಸಿದ ಬೃಹತ್ ರಕ್ತದಾನ ಶಿಬಿರಗಳನ್ನು ಮೆಚ್ಚಿ ಬ್ಲಡ್ ಬ್ಯಾಂಕ್ ಅಧಿಕಾರಿಗಳು ಅಭಿನಂದನೆಗಳನ್ನು ಹೇಳಿ ಇನ್ನು ಮುಂದೆಯೂ ಇದೇ ರೀತಿ ಸಾಮಾಜಿಕ ಸೇವೆಗಳನ್ನು ಮುಂದುವರಿಸಲು ಹುರಿತುಂಬಿದರು.

ಸೌದಿ ಅರೇಬಿಯಾದ ರಾಜಧಾನಿಯಾದ ರಿಯಾದ್ ನಲ್ಲಿ ಆಗಸ್ಟ್ 15 ಕೆಸಿಎಫ್ ಕಾರ್ಯಕರ್ತರ ಸಮ್ಮಿಲನ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಸೌದಿ ಮಿಲಿಟರಿ ಹಾಸ್ಪಿಟಲ್ ವೈದ್ಯರಾದ ಡಾ| ಅಬ್ದುಲ್ ಮಜೀದ್ ರವರು ಮುಖ್ಯ ಅತಿಥಿಯಾಗಿ ಆಗಮಿಸಿ ಸಂದೇಶ ಭಾಷಣವನ್ನು ಮಾಡಿದರು.

ಒಟ್ಟಿನಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವವನ್ನು ಕೆಸಿಎಫ್ ಕಾರ್ಯಕರ್ತರು ಹಲವು ಕಡೆ ಹಲವಾರು ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಯಿತು.

error: Content is protected !! Not allowed copy content from janadhvani.com