ನರಿಂಗಾನ :75 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಯಿತು.
ಸಂಸ್ಥೆಯ ಮ್ಯಾನೇಜರ್ ಹಾಗೂ ಮುಖ್ಯಸ್ಥರಾದ ಅಬ್ದುಲ್ ಖಾದರ್ ಸಖಾಫಿ ರವರು ಧ್ವಜಾರೋಹಣಗೈದರು.
ಕಾರ್ಯಕ್ರಮದಲ್ಲಿ ಶಾಲಾ ಸಂಸ್ಥೆಯ ನಿರ್ದೇಶಕರಾದ ಮೊಹಮ್ಮದ್ ಕುಂಞಿ ಅಮ್ಜದಿ, ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಮುನೀರ್ ಸಖಾಫಿ, ಪ್ರಾಸ್ತಾವಿಕ ಭಾಷಣ ಗೈದರು. ಸಂಚಾಲಕರಾದ ಹಾಜಿ ಅಬ್ದುಲ್ಲಾ ಮೊರ್ಲ, ಅಬ್ದುಲ್ ಖಾದರ್ ಝುಹ್ರಿ, ಮೊಹಿದ್ದೀನ್ ಹಾಜಿ ಮಲಾಝ್, ಪುತ್ತು ಹಾಜಿ ಮೊರ್ಲ,ಇಕ್ಬಾಲ್ ಮರ್ಝೂಖಿ, ಜುನೈದ್ ಮಾರ್ಝೂಖಿ, ಬಾವುಚ್ಚಾ ಉಪಸ್ಥರಿದ್ದರು. ಕಾರ್ಯಕ್ರಮವನ್ನು
ಮುಖ್ಯ ಶಿಕ್ಷಕರಾದ ಹಾರಿಸ್ ಕೋಡಿ ರವರು ನಿರೂಪಿಸಿದರು.ಕೊನೆಯದಾಗಿ ಮಹಮ್ಮದ್ ಅಲಿ ರವರು ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.