janadhvani

Kannada Online News Paper

ಎಸ್ಸೆಸ್ಸೆಫ್ ಮಧ್ಯನಡ್ಕ : ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕುರ್ನಾಡು: ಎಸ್.ಎಸ್.ಎಫ್ ಮಧ್ಯನಡ್ಕ ಶಾಖೆಯ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು. ಮಸೀದಿಯ ಅಧ್ಯಕ್ಷರಾದ ಎಂ ಅಬೂಬಕ್ಕರ್ ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಿದರು. ಎಸ್ಸೆಸೆಫ್ ಮಧ್ಯನಡ್ಕ ಶಾಖೆಯ ನಿರ್ದೇಶಕರಾದ ಮಧ್ಯನಡ್ಕ ಉಸ್ತಾದರು ದುಆ ನೆರವವೇರಿಸಿದರು.ತದನಂತರ ಸಭಾ ಕಾರ್ಯಕ್ರಮ ನಡೆಯಿತು.

ಎಸ್ಸೆಸೆಫ್ ಜಿಲ್ಲಾ ಸದಸ್ಯರಾದ ಇಕ್ಬಾಲ್ ಎಂ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಸಿದ್ದೀಕ್ ಸಅದಿ ಉಸ್ತಾದರು ಕಾರ್ಯಕ್ರಮ ಉದ್ಘಾಟಿಸಿದರು. ಹಿದಾಯತ್ತುಲ್ ಇಸ್ಲಾಂ ಮದ್ರಸದ ಸದರ್ ಉಸ್ತಾದ್ ಹುಸೈನ್ ಸಖಾಫಿ ಸಂದೇಶ ಭಾಷಣ ಮಾಡಿದರು. ಈ ಸಂದರ್ಭ ಮಧ್ಯನಡ್ಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಎಂ, SYS ಪ್ರಧಾನ ಕಾರ್ಯದರ್ಶಿ ಮಜೀದ್ KM, ಜಮಾಅತಿನ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಎಂ, ಜಮಾಅತಿನ ಹಿರಿಯ ಸದಸ್ಯರಾದ ಉಮ್ಮರ್ ಎಂ, SSF ಮಾಜಿ ಅಧ್ಯಕ್ಷರಾದ ಆಸಿಫ್ KM ಮತ್ತಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com