janadhvani

Kannada Online News Paper

ಮರ್ಧಾಳ ಯೂಥ್ ಫೆಡರೇಷನ್‍ನಿಂದ ಹಸಿವು ಮುಕ್ತ ಯೋಜನೆಗೆ ಚಾಲನೆ

ಕಡಬ: ನುಸ್ರತುಲ್ ಇಸ್ಲಾಂ ಇಂಟರ್ನ್ಯಾಷನಲ್ ಯೂಥ್ ಫೆಡರೇಷನ್ ಮರ್ಧಾಳ ಹಮ್ಮಿಕೊಂಡ “ಹಸಿವು ಮುಕ್ತ ಕುಟುಂಬ” ಯೋಜನೆಯ ಮೂರನೇ ಹಂತದ ಉದ್ಘಾಟನಾ ಕಾರ್ಯಕ್ರಮವು, ಸ್ವಾತಂತ್ರ್ಯ ದಿನದಂದು ಮರ್ಧಾಳ ಮಸ್ಜಿದ್ ಅಂಗನದಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಜಮಾಅತ್ ಖತೀಬ್, ಉಸ್ತಾದ್ ಅಬ್ದುಲ್ ಸಲಾಂ ಮದನಿ, ಹಾಗೂ ಜಮಾಅತ್ ನ ಅಧ್ಯಕ್ಷರು, ಹಾಜಿ ಅಬೂಬಕ್ಕರ್ ಪಟ್ಟೆ “ಹಸಿವು ಮುಕ್ತ ಕುಟುಂಬ” ಯೋಜನೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜಮಾತ್ ನ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಉಪಕಾರ್ಯದರ್ಶಿ, ಖಜಾಂಜಿ ಮತ್ತು ಇನ್ನಿತರ ಜಮಾಅತ್ ಪಧಾಧಿಕಾರಿಗಳು ಪಾಲ್ಗೊಂಡಿದ್ದರು.

N.i.i.Y.F ಇದರ ಖಜಾಂಜಿ ಹಾಜಿ ಸಿರಾಜ್ ಕೋಡಿಕಂಡ ಮತ್ತು ಮಾಜಿ ಗೌರವಧ್ಯಕ್ಷ, ಉಸ್ತಾದ್ ಅಬ್ದುಲ್ ರಹಿಮಾನ್ ಪಾಲೆತಡ್ಕ ಹಾಗೂ ಕಾರ್ಯಕಾರಿ ಸಮಿತಿಯವರು “ಹಸಿವು ಮುಕ್ತ ಕುಟುಂಬ” ಯೋಜನೆಯ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
ಅಬ್ದುಲ್ ಮಜೀದ್ ದುಬೈ ಸ್ವಾಗತಿಸಿ, ಧನ್ಯವಾದಗೈದರು.

error: Content is protected !! Not allowed copy content from janadhvani.com