janadhvani

Kannada Online News Paper

ಎಸ್ಸೆಸ್ಸೆಫ್ ಸುನ್ನತ್ ಕೆರೆ ಯುನಿಟ್ :75ನೇ ಸ್ವಾತಂತ್ರ್ಯ ದಿನಾಚರಣೆ

SSF ಸುನ್ನತ್-ಕೆರೆ ಯುನಿಟ್ ವತಿಯಿಂದ ಇಂದು 75ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.ಧ್ವಜಾರೋಹಣ ಕಾರ್ಯಕ್ರಮವನ್ನು SYS ಗುರುವಾಯನಕೆರೆ ಶಾಖೆ ಕೋಶಾಧಿಕಾರಿ ಬಹು: ಹಮೀದ್ ಮುಸ್ಲಿಯಾರ್ ನೆರವೇರಿಸಿದರು.

ಬಹು:ನಾಸರ್ ಅಹ್ದಲ್, ಭಾರತಕ್ಕೆ ಸ್ವಾತಂತ್ರ ತಂದುಕೊಟ್ಟ ವೀರಧೀರ ನಾಯಕರ ಆ ದಿನದ ಪರಿಶ್ರಮ, ತ್ಯಾಗ ಬಲಿದಾನಗಳ ಸ್ಮರಿಸಿ ಆಶಂಸ ಭಾಷಣವನ್ನು ಮಾಡಿದರು.

ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಪಿಲಿಚಂಡಿಕಲ್ಲು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಜ:ಅಬ್ದುಲ್ ಹಕೀಂ ಹಾಗೂ ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಜ:ಸಮೀರ್ ಪ್ಲಾಸ್ಟಿಕ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ SSF ಸುನ್ನತ್-ಕೆರೆ ಯುನಿಟ್ ಪ್ರ.ಕಾರ್ಯದರ್ಶಿ ಜ:ತಾಜುದ್ದೀನ್ ಸ್ವಾಗತಿಸಿ, SSF ಸುನ್ನತ್-ಕೆರೆ ಯುನಿಟ್ ಅಧ್ಯಕ್ಷರಾದ ಜ: ಇಸಾಕ್ ಧನ್ಯವಾದಗೈದರು. ಈ ಕಾರ್ಯಕ್ರಮದಲ್ಲಿ
ಊರಿನೆಲ್ಲಾ ಹಿರಿಯ , ಕಿರಿಯ ಸದಸ್ಯರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com