ಕೈರಂಗಳ : ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ವತಿಯಿಂದ 75 ನೇ ಭವ್ಯ ಭಾರತದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಸಂಸ್ಥೆಯ ಕಛೇರಿಯಲ್ಲಿ ನಡೆಯುತು.
ತೋಟಾಲ್ ಜುಮಾ ಮಸ್ಜಿದ್ ಖತೀಬ್ ಅಲ್ಹಾಜ್ ಮುಹಿಯ್ಯದ್ದೀನ್ ಸಅದಿ ತೋಟಾಲ್ ದುವಾ ನೆರವೇರಿಸಿ ಸ್ವಾತಂತ್ರ್ಯ ಸಂದೇಶ ನೀಡಿದರು.ಸಂಸ್ಥೆಯ ಡೈರೆಕ್ಟರ್ ಹೈದರ್ ಕೈರಂಗಳ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಚಂದ್ರಹಾಸ್ ಕಣಂತೂರ್,ಪಂಚಾಯತ್ ಸದಸ್ಯರಾದ ಜನಾರ್ದನ ಕುಲಾಲ್,ಹಿರಿಯರಾದ ಇಬ್ರಾಹಿಂ ಪಾರೆ,ಅಹ್ಮದ್ ಕುಂಞಿ,ತೋಟಾಲ್ ಜುಮಾ ಮಸ್ಜಿದ್ ಕಾರ್ಯದರ್ಶಿ ಮುಹಮ್ಮದ್ ತೋಟಾಲ್,ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಅಧ್ಯಕ್ಷ ಶರೀಫ್, ಇಕ್ಬಾಲ್ ಕೈರಂಗಳ, ಫಾರೂಕ್ ಕೈರಂಗಳ, ಮುನೀರ್ ಮಾಸ್ಟರ್, ಸಲಾಂ ವಿದ್ಯಾನಗರ,SSF ಮೋಂಟುಗೊಳಿ ಸೆಕ್ಟರ್ ಕಾರ್ಯದರ್ಶಿ ರಾಫಿ ತೋಟಾಲ್ ಮತ್ತಿತರರ ಉಪಸ್ಥಿತಿ.
ಸದಸ್ಯರಾದ ಜಾಬಿರ್ ತೋಟಾಲ್ ಸ್ವಾಗತಿಸಿ ವಂದಿಸಿದರು.