janadhvani

Kannada Online News Paper

ಬೆಳ್ತಂಗಡಿ:ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಸ್ವಾತಂತ್ರ್ಯೋತ್ಸವ

ಬೆಳ್ತಂಗಡಿ, ಆ 15: 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ದ್ವಜಾರೋಹಣ ಕಾರ್ಯಕ್ರಮವು ಬೆಳ್ತಂಗಡಿ, ಸಂಜಯ ನಗರ ಜಂಕ್ಷನ್ ಬಳಿ ನಡೆಯಿತು.

ಸಂಜಯ್ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷರಾದ ಹನೀಫ್ ವರ್ಷಾ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ದಾರುಸ್ಸಲಾಮ್ ಎಜುಕೇಶನ್ ಸಂಸ್ಥೆಯ ಪ್ರಧ್ಯಾಪಕರಾದ ಅಬ್ದುಲ್ ಸಮದ್ ಭಾಗವಹಿಸಿ ಸಂದೇಶ ಭಾಷಣ ಮಾಡಿದರು.

2021ನೇ ಸಾಲಿನ ದ್ವಿತೀಯ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುವ ಬೆಳ್ತಂಗಡಿಯ ಸಂಜಯ ನಗರ ನಿವಾಸಿ ಮಹಮ್ಮದ್ ಕುದ್ರಡ್ಕ ಪುತ್ರ ಸಹಲ್ ಹಾಗೂ ಇನ್ನೋರ್ವ ಸಂಜಯ ನಗರ ನಿವಾಸಿ ಶರೀಫ್ ರವರ ಪುತ್ರ ರಮೀಝ್ ಇವರನ್ನು ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಸ್ಮರಣಿಕೆ ಹಾಗೂ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.

ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಶುಭ ಹಾರೈಸಲಾಯಿತು. ಅಕ್ಬರ್ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

error: Content is protected !! Not allowed copy content from janadhvani.com