ರಿಯಾದ್ : ಸೌದಿ ಅರೇಬಿಯಾಕ್ಕೆ ಪ್ರವೇಶ ನಿಷೇಧಿಸಲ್ಪಟ್ಟ ದೇಶಗಳಲ್ಲಿ ಸೌದಿ ಅರೇಬಿಯಾದ ಸಂದರ್ಶಕ ವೀಸಾ ಹೊಂದಿರುವವರ ವೀಸಾ ಮಾನ್ಯತೆಯನ್ನು ಉಚಿತವಾಗಿ ನವೀಕರಿಸಿದೆ.
ವೀಸಾ ಗಡುವನ್ನು ಸೆಪ್ಟೆಂಬರ್ 30 ರವರೆಗೆ ಉಚಿತವಾಗಿ ವಿಸ್ತರಿಸಲಾಗಿದೆ. ಈ ನಿರ್ಧಾರವು ಭಾರತ ಸೇರಿದಂತೆ ದೇಶಗಳಲ್ಲಿರುವ ವಲಸಿಗರಿಗೆ ಅನುಕೂಲವಾಗಲಿದೆ.
ಸೌದಿ ಅರೇಬಿಯಾಕ್ಕೆ ನೇರ ವಿಮಾನಗಳನ್ನು ಪುನರಾರಂಭಿಸದ ದೇಶಗಳಲ್ಲಿರುವವರ, ಬಳಕೆಯಾಗದ ಸೌದಿ ಸಂದರ್ಶಕ ವೀಸಾಗಳ ಮಾನ್ಯತೆಯನ್ನು ನವೀಕರಿಸಲಾಗುವುದು.
ಅವಧಿ ಮುಗಿದ ಮತ್ತು ಮುಕ್ತಾಯಗೊಳ್ಳುವ ಸಂದರ್ಶಕರ ವೀಸಾಗಳನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗುತ್ತದೆ.ವಿಸ್ತರಣೆಯು ಉಚಿತ ಮತ್ತು ಸ್ವಯಂಚಾಲಿತವಾಗಿದೆ.
ಈ ಆದೇಶವು ಸೌದಿ ಕೆಂಪು ಪಟ್ಟಿಯಲ್ಲಿರುವ ಭಾರತ ಸೇರಿದಂತೆ ದೇಶಗಳ ಸಂದರ್ಶಕರಿಗೆ ಪ್ರಯೋಜಕಾರಿಯಾಗಿದೆ .ಅನೇಕ ಅವಲಂಬಿತರು ವೀಸಾ ಲಭಿಸಿ, ವಿಮಾನ ಸೇವೆ ಲಭ್ಯವಿಲ್ಲದ ಕಾರಣ ಸೌದಿ ಅರೇಬಿಯಾಕ್ಕೆ ತಮ್ಮ ಪ್ರಯಾಣವನ್ನು ರದ್ದುಗೊಳಿಸಬೇಕಾಯಿತು.