janadhvani

Kannada Online News Paper

ವ್ಯಾಕ್ಸಿನೇಷನ್ ಇಲ್ಲದೆ ದುಬೈಗೆ ಮರಳಲು ಅವಕಾಶ- GDRFA ಅನುಮತಿ ಕಡ್ಡಾಯ

ದುಬೈ : ದುಬೈ ನಿವಾಸ ವೀಸಾ ಹೊಂದಿರುವವರು ವ್ಯಾಕ್ಸಿನೇಷನ್ ಇಲ್ಲದೆ ದುಬೈಗೆ ಮರಳಬಹುದು. ಆದರೆ, GDRFA ಅನುಮೋದನೆ ಅಗತ್ಯವಿದೆ.

48 ಗಂಟೆಗಳ ಒಳಗಿನ ಪಿಸಿಆರ್ ಫಲಿತಾಂಶ ಮತ್ತು 4 ಗಂಟೆಗಳ ಒಳಗಿನ ರಾಪಿಡ್ ಟೆಸ್ಟ್ ಫಲಿತಾಂಶವನ್ನು ಹೊಂದಿರಬೇಕು. ಏರ್ ವಿಸ್ತಾರ ಇದನ್ನು ಪ್ರಕಟಿಸಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಎಮಿರೇಟ್ಸ್ ವಿಮಾನ ಸಂಸ್ಥೆಗಳು GDRFA ಅನುಮೋದನೆ, PCR ಟೆಸ್ಟ್, ರಾಪಿಡ್ ಟೆಸ್ಟ್ ನೆಗೆಟಿವ್ ಫಲಿತಾಂಶ ಹೊಂದಿರುವವರು ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಇಲ್ಲದೇ ದುಬೈಗೆ ಪ್ರಯಾಣಿಸಲು ಅನುಮತಿ ನೀಡಿದೆ. ಆದರೆ ಇತರ ಎಮಿರೇಟ್‌ಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಅದೇ ಸಮಯದಲ್ಲಿ,ಭಾರತದ ಕೋವ್‌ಶೀಲ್ಡ್ ಲಸಿಕೆ ಪಡೆದವರಿಗೂ ದುಬೈಗೆ ಮರಳಬಹುದು ಎಂದು ಫ್ಲೈ ದುಬೈ ಹೇಳಿದೆ. ಎರಡನೇ ಡೋಸ್ ಪಡೆದು14 ದಿನಗಳು ಕಳೆದಿರಬೇಕು.