janadhvani

Kannada Online News Paper

ಕುರ್‌ಆನ್ ಪಾರಾಯಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಮಾಣಿಯ ಇಸಾಕ್

ಮಾಣಿ : ಮರ್ಕಝ್ ಮೈಮನ್ ಸಯ್ಯಿದ್ ತ್ವಾಹಿರುಲ್ ಅಹ್ದಲ್ ಮೆಮೊರಿಯಲ್ ಎಜು ಸೆಂಟರ್ ಕೋಟಕ್ಕುನ್ನು ಕೇರಳ ಆಯೋಜಿಸಿದ ” ಇಖ್‌ರ‌ಅ್ ಯಿಂಡೆ ಸೌಂದರ್ಯಂ ” ಎಂಬ ಕು‌ರ್‌ಆನ್ ಪಾರಾಯಣ ಸ್ಪರ್ಧೆಯಲ್ಲಿ ಕುಟ್ಯಾಡಿ ಸಿರಾಜುಲ್ ಹುದಾ ವಿದ್ಯಾರ್ಥಿ ಬಂಟ್ವಾಳ ತಾಲೂಕಿನ ಮಾಣಿಯ ಇಸಾಕ್ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಇವರು ಮಾಣಿ ದಾರುಲ್ ಇರ್ಶಾದ್‌ನ ಹಳೆಯ ವಿದ್ಯಾರ್ಥಿ ಹಾಗೂ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ಸದಸ್ಯರು ಆಗಿರುತ್ತಾರೆ.