janadhvani

Kannada Online News Paper

ಕೊಡಗು SSF ನಿಂದ ಜಿಲ್ಲಾಧ್ಯಂತ ಬೆಲೆಯೇರಿಕೆಯ ವಿರುದ್ಧ ಒಬ್ಬಂಟಿ ಪ್ರತಿಭಟನೆ

ಅನಿಯಂತ್ರಿತವಾಗಿ ಏರುತ್ತಿರುವ ಪೆಟ್ರೋಲ್ ಡೀಸೆಲ್ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ 25-07-2021ರ ಭಾನುವಾರದಂದು ಜಿಲ್ಲಾದ್ಯಂತ ಸುಮಾರು 80 ಶಾಖೆಗಳಲ್ಲಿ ಸಾವಿರಾರು ಎಸ್ಸೆಸ್ಸೆಫ್‌ನ ಕಾರ್ಯಕರ್ತರು ಬಿತ್ತಿಪತ್ರ ಪದರ್ಶಿಸುವ ಹಾಗೂ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ಸರ್ಕಾರದ ಬೆಲೆ ಏರಿಕೆ ವಿರುದ್ಧ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆರವರು ಮಾತನಾಡಿ ಎಸ್ಎಸ್ಎಫ್ ಯಾವುದೇ ರಾಜಕೀಯ ಪಕ್ಷಗಳ ಹಿಂದೆ ದುಂಬಾಲು ಬೀಳುವ ಸಂಘಟನೆಯಲ್ಲ, ಧಾರ್ಮಿಕ ಸಂಘಟನೆಯಾಗಿದ್ದರೂ ಕೂಡ ಸಾಮಾಜಿಕ ಕಳಕಳಿಯನ್ನೂ ಹೊಂದಿರುವಂತಹ ಸಂಘಟನೆಯಾಗಿದೆ. ಜನಸಾಮಾನ್ಯರಿಗೆ ಸಮಸ್ಯೆಯೊಡ್ಡುವ ಮತ್ತು ಅನ್ಯಾಯವಾಗುವ ಯಾವುದೇ ಕಾರ್ಯಗಳಾದರೂ ಪಕ್ಷ ಜಾತಿ ವರ್ಗ ನೋಡದೆ ಅನ್ಯಾಯದ ವಿರುದ್ಧ ಶಬ್ದವನ್ನು ಎತ್ತಿದ್ದು ಇದೀಗ ದಿನೊಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದಾಗಿ ಭಾರತದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಬದುಕಲು ಕಷ್ಟಕರವಾದಂತಾಗಿದೆ.

ಸರಕಾರಗಳು ಜನರ ಹಿತ ಹಾಗೂ ಒಳಿತನ್ನು ಅರಿತು ಆಡಳಿತ ನಡೆಸಬೇಕೆ ಹೊರತು ದೇಶದ ಸಮಸ್ಯೆ ಮತ್ತು ಅಭಿವೃದ್ಧಿಯ ಹೆಸರನ್ನು ಹೇಳಿ ಸಾಮಾನ್ಯ ಜನರ ಮೇಲೆ ತೆರಿಗೆಯ ಹೊರೆಯನ್ನು ಹಾಕಬಾರದು. ಅನಿಯಂತ್ರಿತವಾದ ಬೆಲೆ ಏರಿಕೆಯು ಜನತೆಗೆ ಸಹಿಸಲಸಾಧ್ಯವಾಗಿದ್ದು ಸಾರ್ವಜನಿಕರು ಸರಕಾರದ ವಿರುದ್ಧ ತಿರುಗಿ ಬೀಳುವ ಮುನ್ನ ಎಚ್ಚೆತ್ತು ಪರಿಹಾರ ಕಂಡುಕೊಳ್ಳಬೇಕೆಂದು ಎಚ್ಚರಿಸಿದರು.

ಎಸ್ಎಸ್ಎಫ್ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ರಾಜ್ಯದಾದ್ಯಂತ ಪೆಟ್ರೋಲ್ ಡೀಸೆಲ್ ಹಾಗೂ ಇನ್ನಿತರ ವಸ್ತುಗಳ ಅನಿಯಂತ್ರಿತ ಬೆಲೆ ಏರಿಕೆ ವಿರುದ್ಧ ಪ್ರತಿಭಟನಾ ಸಭೆಗಳು ನಡೆಸಲಾಗಿತ್ತು. ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಇನ್ನಿತರ ಕೆಲವು ಅಡಚಣೆಗಳಿಂದಾಗಿ ಜಿಲ್ಲೆಯಲ್ಲಿ ಈ ರೀತಿಯ ಸಾಂಕೇತಿಕ ಪ್ರತಿಭಟನೆ ಮಾಡಲಾಯಿತು ಎಂದು ಎಸ್ಎಸ್ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com