ರಿಯಾದ್ :ವಿದೇಶೀಯರ ಉಮ್ರಾ ಯಾತ್ರೆಯ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲಾಗುತ್ತಿದೆ. ಈ ವರ್ಷದ ಹಜ್ ಮುಕ್ತಾಯದೊಂದಿಗೆ ಉಮ್ರಾ ಪುನರಾರಂಭಗೊಂಡಿದೆ. ವಿದೇಶದಿಂದ ಉಮ್ರಾ ಯಾತ್ರೆಯು ಮೊಹರಂ 1 ರಿಂದ ಆರಂಭಿಸಲಾಗುವುದು ಎಂದು ಹಜ್ ಸಚಿವಾಲಯ ಪ್ರಕಟಿಸಿದೆ.
ಹಿಜ್ರಾ ವರ್ಷದ ಆರಂಭವಾದ ಮೊಹರಂ I (ಆಗಸ್ಟ್ 10, 2021) ನಿಂದ ಯಾತ್ರಿಕರು ಪವಿತ್ರ ಭೂಮಿಗೆ ಆಗಮಿಸಲು ಅವಕಾಶ ನೀಡಲಾಗಿದೆ. ಕೋವಿಡ್ ಪ್ರಕರಣ ಹೆಚ್ಚಾಗಿರುವ ಭಾರತ, ಪಾಕಿಸ್ತಾನ, ಇಂಡೋನೇಷ್ಯಾ, ಈಜಿಪ್ಟ್, ಟರ್ಕಿ, ಅರ್ಜೆಂಟೀನಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಲೆಬನಾನ್ ಸೇರಿದಂತೆ ಒಂಬತ್ತು ದೇಶಗಳಲ್ಲಿನ ನಿಷೇಧವು ಮುಂದುವರಿಯಲಿದೆ.
ಫಿಜರ್, ಮೊಡೆನಾ, ಅಸ್ಟ್ರಾಜೆನೆಕಾ ಮತ್ತು ಜೆ & ಜೆ ಮುಂತಾದ ಕಂಪನಿಗಳಿಂದ ಲಸಿಕೆ ಹಾಕಿದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಮ್ರಾ ವೀಸಾ ನೀಡಲಾಗುವುದು ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಪ್ರಕಟಿಸಿದೆ.