janadhvani

Kannada Online News Paper

ಸೌದಿ ಏರ್‌ಲೈನ್ಸ್‌ನಲ್ಲಿ ಟಿಕೆಟ್ ಖರೀದಿಸುವವರಿಗೆ ಉಮ್ರಾ ಪರವಾನಗಿ- ಜು.25 ರಿಂದ ಬುಕಿಂಗ್ ಆರಂಭ

ರಿಯಾದ್ : ಉಮ್ರಾ ಯಾತ್ರೆಯನ್ನು ಪುನರಾರಂಭಿಸಲು ಸೌದಿ ಅರೇಬಿಯಾ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಜುಲೈ 25 ರಿಂದ ಸೌದಿ ಏರ್‌ಲೈನ್ಸ್‌ನಲ್ಲಿ ಟಿಕೆಟ್ ಖರೀದಿಸುವವರಿಗೆ ಉಮ್ರಾ ಪರವಾನಗಿ ಲಭ್ಯ.

ಹಜ್ ತೀರ್ಥಯಾತ್ರೆಯ ಅಂಗವಾಗಿ ಜುಲೈ 11 ರಂದು ಉಮ್ರಾ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಹಜ್ ಕರ್ಮಗಳು ಮುಗಿಯುತ್ತಿದ್ದಂತೆ, ಉಮ್ರಾ ತೀರ್ಥಯಾತ್ರೆ ಪುನರಾರಂಭದ ಸಿದ್ಧತೆಗಳು ಪ್ರಾರಂಭವಾಗಿವೆ.

ಉಮ್ರಾ ಬುಕಿಂಗ್ ದುಲ್ ಹಜ್ 15 ಅಥವಾ ಜುಲೈ 25 ರಿಂದ ಪುನರಾರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ದಿನಕ್ಕೆ 20,000 ಜನರಿಗೆ ಉಮ್ರಾ ನಿರ್ವಹಿಸಲು ಅವಕಾಶ ನೀಡಲಾಗುವುದು. ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಹಜ್‌ಗೆ ಮುಂಚಿನಷ್ಟು ಸಂಖ್ಯೆಯನ್ನು ಯಥಾಸ್ಥಿತಿಗೆ ಹೆಚ್ಚಿಸಲಾಗುವುದು.

ಏತನ್ಮಧ್ಯೆ, ಜಿದ್ದಾ ಮತ್ತು ತ್ವಾಯಿಫ್ ಗೆ ವಿಮಾನ ಟಿಕೆಟ್ ಖರೀದಿಸುವವರಿಗೆ ಉಮ್ರಾ ಪರವಾನಗಿ ನೀಡಲಾಗುವುದು ಎಂದು ರಾಷ್ಟ್ರೀಯ ವಿಮಾನ ಸಂಸ್ಥೆ ಸೌದಿಯಾ ಏರ್ಲೈನ್ಸ್ ಪ್ರಕಟಿಸಿದೆ. 25 ರಿಂದ ಸೌದಿ ವೆಬ್‌ಸೈಟ್ ಮೂಲಕವೂ ಈ ಸೇವೆ ಲಭ್ಯವಾಗಲಿದೆ.

ತವಕ್ಕಲ್ನಾ ಮತ್ತು ಇಅ್ ತಮರ್ನಾ ಆ್ಯಪ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಟಿಕೆಟ್ ಖರೀದಿ ಸಮಯದಲ್ಲಿ ನೀಡಬೇಕು. ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ, ಪ್ರಯಾಣಿಕರು ಉಮ್ರಾಕ್ಕೆ ಅರ್ಹರಾಗಿದ್ದಾರೆಯೇ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಪರಿಶೀಲಿಸಲಿದೆ. ಉಮ್ರಾ ಪರವಾನಗಿ ನೀಡುವ ಮೂಲಕ, ಉಮ್ರಾ ಪರವಾನಗಿಯನ್ನು ಪ್ರಯಾಣಿಕರ ತವಕ್ಕಲ್ನಾ ಮತ್ತು ಇಅ್ ತಮರ್ನಾದಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಮೊಬೈಲ್‌ನಲ್ಲಿ ಸಂದೇಶವನ್ನು ಕಳುಹಿಸಲಾಗುತ್ತದೆ.

error: Content is protected !! Not allowed copy content from janadhvani.com