janadhvani

Kannada Online News Paper

ಯುಎಇ-ಭಾರತ ಪ್ರಯಾಣ ನಿಷೇಧವನ್ನು ತೆಗೆದುಹಾಕಲು ತಕ್ಷಣ ಕ್ರಮ ಕೈಗೊಳ್ಳಬೇಕು- ರಾಯಭಾರಿ

ದುಬೈ: ಭಾರತೀಯರ ಮೇಲಿನ ಪ್ರಯಾಣ ನಿಷೇಧವನ್ನು ತೆಗೆದುಹಾಕಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಯುಎಇಯ ಭಾರತೀಯ ರಾಯಭಾರಿ ಪವನ್ ಕಪೂರ್ ಆಗ್ರಹಿಸಿದ್ದಾರೆ.

ದುಬೈ ಎಕ್ಸ್‌ಪೋ ಸಚಿವ ಮತ್ತು ಮಹಾನಿರ್ದೇಶಕ ರೀಮ್ ಅಲ್ ಹಶ್ಮಿ ಅವರೊಂದಿಗಿನ ಸಭೆಯಲ್ಲಿ ಅವರು ಈ ಬೇಡಿಕೆ ಮುಂದಿಟ್ಟಿದ್ದಾರೆ. ನೀಡಿದ್ದಾರೆ.

ಲಸಿಕೆ ಹಾಕಿದ ಭಾರತೀಯರನ್ನು ಕರೆತರಲು ಅಗತ್ಯ ಕ್ರಮ ಮತ್ತು ಭಾರತ ಮತ್ತು ಯುಎಇಯಲ್ಲಿನ ಲಸಿಕೆಗಳ ಪರಸ್ಪರ ಅನುಮೋದನೆ ಕುರಿತು ಚರ್ಚೆಗಳು ನಡೆದಿದೆ. ಏತನ್ಮಧ್ಯೆ, ಭಾರತದಲ್ಲಿ ಸಿಲುಕಿರುವ ಆರೋಗ್ಯ ಕಾರ್ಯಕರ್ತರು ಯುಎಇಗೆ ಮರಳಲು ಪ್ರಾರಂಭಿಸಿದ್ದಾರೆ.

ಭಾರತದಿಂದ ವೈದ್ಯಕೀಯ ತಂಡ ದುಬೈ ಆರೋಗ್ಯ ಪ್ರಾಧಿಕಾರದ ವಿಶೇಷ ಅನುಮತಿಯೊಂದಿಗೆ ಯುಎಇಗೆ ಮರಳಿದೆ. ಆಸ್ಟರ್ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳ ವೈದ್ಯರು, ದಾದಿಯರು ಮತ್ತು ಅರೆವೈದ್ಯರ ತಂಡ ಆಗಮಿಸಿತು. ಇತರ ಖಾಸಗಿ ವೈದ್ಯಕೀಯ ಉದ್ಯಮಗಳು ಭಾರತದಲ್ಲಿ ಸಿಲುಕಿರುವ ಉದ್ಯೋಗಿಗಳನ್ನು ಕರೆತರುವ ಆತುರದಲ್ಲಿದ್ದಾರೆ.

error: Content is protected !! Not allowed copy content from janadhvani.com