janadhvani

Kannada Online News Paper

ಸೌದಿ: ಮತ್ತೆ ಆರು ವಲಯಗಳಲ್ಲಿ ದೇಶೀಕರಣ- 40 ಸಾವಿರ ವಿದೇಶೀಯರ ಉದ್ಯೋಗ ನಷ್ಟ

ರಿಯಾದ್ : ಸೌದಿ ಅರೇಬಿಯಾದಲ್ಲಿ, ಇತರ ಆರು ವಲಯಗಳಲ್ಲಿ ದೇಶೀಕರಣ ನಡೆಯುತ್ತಿದೆ. ಕಾನೂನು, ಚಾಲನಾ ತರಬೇತಿ ಶಾಲೆ , ರಿಯಲ್ ಎಸ್ಟೇಟ್, ಚಲನಚಿತ್ರೋದ್ಯಮ, ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ತಾಂತ್ರಿಕ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ದೇಶೀಕರಣ ಜಾರಿಗೆ ಬರಲಿದೆ. 40,000 ಉದ್ಯೋಗಗಳಲ್ಲಿ ಸೌದಿಗಳನ್ನು ನೇಮಿಸಿಕೊಳ್ಳುವುದು ಇದರ ಗುರಿಯಾಗಿದೆ.

ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಅಹ್ಮದ್ ಅಲ್-ರಾಜಿ ಅವರು ಉದ್ಯೋಗದ ಆರು ಕ್ಷೇತ್ರಗಳಲ್ಲಿ ಹೊಸ ದೇಶೀಕರಣವನ್ನು ಜಾರಿಗೊಳಿಸುವುದಾಗಿ ಘೋಷಿಸಿದರು. ಈ ಮೂಲಕ 40,000 ಕ್ಕೂ ಹೆಚ್ಚು ಸ್ಥಳೀಯರನ್ನು ಉದ್ಯೋಗದಲ್ಲಿ ನೇಮಿಸುವ ಗುರಿ ಹೊಂದಿದೆ. ಹೊಸ ದೇಶೀಕರಣವು ಚಲನಚಿತ್ರೋದ್ಯಮದ ಉದ್ಯೋಗಗಳು, ಕಾನೂನು ಸಲಹೆ, ಕಾನೂನು ಸಂಸ್ಥೆಗಳು, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಉದ್ಯೋಗಗಳು, ರಿಯಲ್ ಎಸ್ಟೇಟ್, ಚಾಲನಾ ಶಾಲೆಗಳು ಮತ್ತು ಕಸ್ಟಮ್ಸ್ ಕ್ಲಿಯರೆನ್ಸ್ಗೆ ಅನ್ವಯಿಸುತ್ತದೆ.

ಜನರಲ್ ಅಥಾರಿಟಿ ಫಾರ್ ಸ್ಟ್ಯಾಟಿಸ್ಟಿಕ್ಸ್ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ , ದೇಶೀಕರಣದ ವಿವಿಧ ಹಂತಗಳಿಂದಾಗಿ ದೇಶದ ನಿರುದ್ಯೋಗ ದರವು ಕುಸಿಯುತ್ತಿದೆ. 2020 ರ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ನಿರುದ್ಯೋಗ ದರವು ಶೇಕಡಾ 12.6 ರಷ್ಟಿತ್ತು. ಆದರೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿರುದ್ಯೋಗ ದರವು ಶೇಕಡಾ 11.7 ಕ್ಕೆ ಇಳಿದಿದೆ. ಈ ಅವಧಿಯಲ್ಲಿ, ಸ್ಥಳೀಯ ಯುವಕರಲ್ಲಿ ನಿರುದ್ಯೋಗ ದರವು ಶೇಕಡ 4 ರಿಂದ 3.7 ಕ್ಕೆ ಮತ್ತು ಯುವತಿಯರಲ್ಲಿ ಶೇಕಡಾ 20.2 ರಿಂದ 16.1 ಕ್ಕೆ ಇಳಿದಿದೆ.

error: Content is protected !! Not allowed copy content from janadhvani.com