ಬೆಂಗಳೂರು: ರಾಜ್ಯ ವಕ್ಫ್ ಬೋರ್ಡ್ ಆಸ್ತಿ ದುರ್ಬಳಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶಾಫಿ ಸಅದಿಯವರು, ಅನ್ವರ್ ಮಾಣಿಪ್ಪಾಡಿಗೆ ಟ್ವೀಟ್ ಮೂಲಕ ಉತ್ತರಿಸಿದ್ದಾರೆ.
ಶಾಫಿ ಸಅದಿಯವರ ಟ್ವೀಟ್ ಈ ಕೆಳಗಿನಂತಿದೆ
“ಅನ್ವರ್ ಮಾಣಿಪ್ಪಾಡಿಯವರ ಟ್ವೀಟನ್ನು ಗಮನಿಸಿದ್ದೇನೆ. ವಕ್ಫ್ ಬೋರ್ಡ್ ಅಧ್ಯಕ್ಷ ಚುನಾವಣೆಯ ಆತಂಕ,ಅಸೂಯೆ ಮತ್ತು ಹತಾಶೆಯನ್ನು ಸಹಿಸಲಾಗದೆ ಮಾಣಿಪ್ಪಾಡಿ ಮಾಡಿರುವ ಆಧಾರ ರಹಿತ ಆರೋಪಕ್ಕೆ ಅವರು ಪ್ರಾಯದಲ್ಲಿ ಹಿರಿಯರು ಎಂಬ ಕಾರಣಕ್ಕೆ ಉತ್ತರಿಸಿಲ್ಲ”
“ಸುಳ್ಳಾರೋಪ ಹರಡುವ ಅವರನ್ನು ನಾನು ಯಾವತ್ತೂ ಕ್ಷಮಿಸುತ್ತೇನೆ. ಆದರೆ ನನ್ನ ಸಹ ಕಾರ್ಯಕರ್ತರು ಕಾನೂನು ಕ್ರಮಕ್ಕಿಳಿದರೆ ನಾನು ಹೊಣೆಯಲ್ಲ ಎಂದು ನೆನಪಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ನಿನ್ನೆಯಷ್ಟೇ ಹೈಕೋರ್ಟ್ ಶಾಫಿ ಸಅದಿ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರತಿಕ್ರಿಯಿಸುವಂತೆ ಸರಕಾರಕ್ಕೆ ಸೂಚಿಸಿ ಮುಂದಿನ ವಿಚಾರಣೆ ಜು.27ಕ್ಕೆಮುಂದೂಡಿತ್ತು.