ನವದೆಹಲಿ: ಕೊರೊನಾ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಯಾನವನ್ನು ಜು.31ರವರೆಗೆ ನಿರ್ಬಂಧಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ಆದೇಶ ಹೊರಡಿಸಿದೆ. ಈ ಹಿಂದೆ ವಿಧಿಸಿದ್ದ ನಿರ್ಬಂಧ ಇಂದಿಗೆ (ಜೂ.30) ಮುಕ್ತಾಯಗೊಳ್ಳಬೇಕಿತ್ತು. ಆದರೆ ಕೊರೊನಾ 3ನೇ ಅಲೆ ಭೀತಿ, ಡೆಲ್ಟಾ ಪ್ಲಸ್ ಭೀತಿ ದೇಶದ ಮೇಲಿದ್ದು, ಭಾರತ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.
ಸರಕು ಸಾಗಾಟ ವಿಮಾನ ಹಾಗೂ ಆಯ್ದ ದೇಶಗಳ ಜೊತೆಗಿನ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಹಾರಾಟ ನಡೆಸುತ್ತಿರುವ ವಿಮಾನಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಡಿಜಿಸಿಎಂ ತಿಳಿಸಿದೆ. ಕೊರೊನಾ ಸಾಂಕ್ರಾಮಿಕ ರೋಗ ಬಾಧಿಸಲು ಶುರುವಾದಗಿನಿಂದ ಅಂದರೆ 2020ರ ಮಾರ್ಚ್ ತಿಂಗಳಿನಿಂದ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಯಾನದ ಮೇಲೆ ನಿರ್ಬಂಧವೇರಲಾಗಿದೆ. 15 ತಿಂಗಳಗಳ ಬ್ಯಾನ್ ಇಂದಿಗೆ ಮುಕ್ತಾಯವಾಗಬೇಕಿತ್ತು. ಕೊರೊನಾ ಕರಿನೆರಳು ಸರಿಯದ ಹಿನ್ನೆಲೆಯಲ್ಲಿ ಇನ್ನೂ ಒಂದು ತಿಂಗಳ ನಿರ್ಬಂಧವನ್ನು ಮುಂದುವರಿಸಲಾಗುತ್ತಿದೆ.
ಆಯ್ದ ಕೆಲ ದೇಶಗಳನ್ನು ಹೊರತುಪಡಿಸಿ ಉಳಿದ ರಾಷ್ಟ್ರಗಳಿಗೆ ಇನ್ನೂ ಒಂದು ತಿಂಗಳ ವಿಮಾನಗಳು ಹಾರಾಡಲ್ಲ. ಈ ಮೂಲಕ ಅಂತಾರಾಷ್ಟ್ರೀಯ ಸಂಪರ್ಕ ಇನ್ನೂ ಕೊರೊನಾ ಭಯದಲ್ಲೇ ಇದೆ.