ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮೀಡಿಯಾ ಸೆಲ್ ವತಿಯಿಂದ ದಿನನಿತ್ಯ ಪ್ರಕಟಗೊಳ್ಳುತ್ತಿರುವ ಪ್ರಚಲಿತ ವರದಿಗಳ SUNUP ಸಂಚಿಕೆಗೆ “,ಪ್ರಧಾನ ಹೆಸರು ಘೋಷಣೆ” ಕಾರ್ಯಕ್ರಮವು ನಾಳೆ ಜುಲೈ 01 ರಂದು ರಾತ್ರಿ 9.00 ಗಂಟೆಗೆ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಯ್ಯೂಟೂಬ್ ಮೂಲಕ ನಡೆಯಲಿದೆ.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಐಟಿ ಕನ್ವೀನರ್ ಆಗಿರುವ ಸಯ್ಯಿದ್ ಯೂಸುಫ್ ನವಾಝ್ ಹೂಡೆ ತಂಙಳ್ ರವರು ದುಆದೊಂದಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಮುಹಮ್ಮದ್ ಸಮೀರ್ ಕೋಡಿಯವರು ಮುನ್ನುಡಿ ನುಡಿಯಲಿದ್ದು, ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಹೆಸರು ಘೋಷಿಸಲಿದ್ದಾರೆ. ಎಂದು ಜಿಲ್ಲಾ ಮಾಧ್ಯಮ ಕನ್ವೀನರ್ ಇಮ್ತಿಯಾಝ್ ಹೊನ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.