ತೈಲಬೆಲೆ ಏರಿಕೆ ವಿರುದ್ಧ ಹಾಗೂ ಅಗತ್ಯ ಸಾಮಾನುಗಳ ಬೆಲೆಯೇರಿಕೆ ವಿರುದ್ಧ ಸುಳ್ಯ ಡಿವಿಷನ್ ವತಿಯಿಂದ ಡಿವಿಷನ್ ಅಧೀನದ 3 ಸೆಕ್ಟರ್ ಗಳ ಸಹಕಾರದೊಂದಿಗೆ ಸುಳ್ಯ ಹಾಗೂ ಜಾಲ್ಸೂರು ಪೆಟ್ರೋಲ್ ಪಂಪ್ ಬಳಿಯಲ್ಲಿ ಸ್ಲೋಗನ್ ಪ್ರದರ್ಶಿಸುವುದರೊಂದಿಗೆ ಘೋಷವಾಕ್ಯಗಳನ್ನು ಮೊಳಗಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ,ಸರಕಾರಕ್ಕೆ ಸಾರ್ವಜನಿಕರ ಅಹವಾಲುಗಳನ್ನು ಸಮರ್ಪಿಸಲು ಪ್ರಯತ್ನಿಸಲಾಯಿತು.
ಎಸ್ಸೆಸ್ಸೆಫ್ ಕ್ಯಾಂಪಸ್ ವಿಧ್ಯಾರ್ಥಿಗಳ ಸಹಿತ ನಿಶ್ಚಿತ ಕಾರ್ಯಕರ್ತರು ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ ನಿಯಮಾನುಸಾರ ಮಾಸ್ಕ್ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.