ದುಬೈ,ಜೂ.19:ಭಾರತದಿಂದ ಯುಎಇಗೆ ಪ್ರಯಾಣಿಸಲು ಹೊಸ ಕೋವಿಡ್ ಪ್ರೋಟೋಕಾಲ್ ಘೋಷಿಸಿದ್ದು,ಯುಎಇ ಅನುಮೋದಿತ ಲಸಿಕೆಯ ಎರಡು ಪ್ರಮಾಣವನ್ನು ಪಡೆದವರು ಈ ತಿಂಗಳ 23 ರಿಂದ ದುಬೈಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ.
ಪ್ರಸ್ತುತ ಸಿನೋಫಾಂ, ಫೈಝರ್, ಬಯೋನ್ಟೆಕ್, ಸ್ಪುಟ್ನಿಕ್, ಆಸ್ಟ್ರಾಝೆನೆಕಾ(ಭಾರತದ ಕೋವಿಶೀಲ್ಡ್) ಮೊದಲಾದವು ಯುಎಇ ಅನುಮೋದಿತ ಲಸಿಕೆಗಳಾಗಿವೆ.
ನಿರ್ಗಮಿಸುವ 48 ಗಂಟೆಗಳ ಒಳಗಿನ ಪಿಸಿಆರ್ ಪರೀಕ್ಷೆಯ ನೆಗಟಿವ್ ಫಲಿತಾಂಶ ಅಗತ್ಯ.ದುಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ, ಮತ್ತೆ ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಕೋವಿಡ್ ಪರೀಕ್ಷಾ ಫಲಿತಾಂಶಗಳಲ್ಲಿ ಕ್ಯೂಆರ್ ಕೋಡ್ ಕಡ್ಡಾಯವಾಗಿದೆ. ನಿರ್ಗಮನಕ್ಕೆ ನಾಲ್ಕು ಗಂಟೆಗಳ ಮೊದಲು ರಾಪಿಡ್ ಪಿಸಿಆರ್ ಪರೀಕ್ಷಾ ಫಲಿತಾಂಶವೂ ಲಭ್ಯವಿರಬೇಕು.
ಹೊಸ ಕೋವಿಡ್ ಪ್ರೋಟೋಕಾಲ್ ಭಾರತೀಯರ ಯುಎಇ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸುವ ಸೂಚನೆಯಾಗಿದೆ.