ಕುವೈತ್ ಸಿಟಿ,ಜೂ.17: ವ್ಯಾಕ್ಸಿನೇಷನ್ ಪೂರ್ಣಗೊಳಿಸಿದ ವಿದೇಶಿಯರಿಗೆ ಆಗಸ್ಟ್ ಒಂದರಿಂದ ಕುವೈತ್‌ಗೆ ಪ್ರವೇಶಿಸಲು ಅನುಮತಿ ನೀಡಲು ನಿರ್ಧರಿಸಲಾಗಿದೆ.
ಇಂದು ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೊಡೆನಾ, ಆಕ್ಸ್‌ಫರ್ಡ್ ಅಸ್ಟ್ರಾ ಸೆನಾಕಾ ಹಾಗೂ ಫೈಜರ್ ಬಯೋಟೆಕ್ ಎರಡು ಡೋಸ್ ಗಳು ಮತ್ತು ಮತ್ತು ಜಾನ್ಸನ್ ಮತ್ತು ಜಾನ್ಸನ್ ವ್ಯಾಕ್ಸ್‌ನ ಒಂದು ಡೋಸ್ ನ್ನು ತೆಗೆದುಕೊಂಡವರಿಗೆ ಪ್ರವೇಶ ಮುಕ್ತವಾಗಿದೆ.
ಕುವೈತ್ ನ ನಿವಾಸ ವೀಸಾ ಹೊಂದಿರುವವರಿಗೆ ಮಾತ್ರ ಪ್ರವೇಶಾನುಮತಿಯಿದ್ದು, ಕುವೈತ್‌ಗೆ ಪ್ರವೇಶಿಸಿದ ಬಳಿಕ ತಮ್ಮ ವಾಸ ಸ್ಥಳದಲ್ಲಿ 7 ದಿನಗಳ ಕ್ವಾರಂಟೈನ್ ಮುಗಿಸಿ, ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದರೆ ಕ್ವಾರಂಟೈನ್ ಕೊನೆಗೊಳಿಸಬಹುದಾಗಿದೆ.
ಪ್ರಸ್ತುತ ಕುವೈತ್‌ನಲ್ಲಿ ವ್ಯಾಕ್ಸಿನೇಷನ್ ಪಡೆದಿರುವ ವಲಸಿಗರು ಆರೋಗ್ಯ ಮುಂಜಾಗ್ರತೆಯನ್ನು ಪಾಲಿಸಿ ದೇಶದಿಂದ ಹೊರಗೆ ಪ್ರಯಾಣ ಹಾಗೂ ಮರು ಪ್ರವೇಶ ಅನುಮತಿಸಲಾಗಿದೆ.