ದಮ್ಮಾಮ್: ಕೇರಳದ ಕೊಲ್ಲಂ ಜಿಲ್ಲೆಯ ಇತಿಕ್ಕರ ಮೂಲದ ಸನಲ್ (35) ದಮ್ಮಾಮ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಸಹೋದ್ಯೋಗಿಯೊಂದಿಗಿನ ಘರ್ಷಣೆಯಲ್ಲಿ ಇರಿತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಇದರಿಂದಾಗಿ ಸನಲ್ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.
ಈ ಘಟನೆ ಅಲ್-ಹಸಾ ಜೆಬೆಲ್ ಶೋಬಾ ಬಳಿ ನಡೆದಿದೆ. ಸನಲ್ ಖಾಸಗಿ ಡೈರಿ ಕಂಪನಿಯ ಉದ್ಯೋಗಿ. ಅದೇ ಕಂಪನಿಯಲ್ಲಿ ಘಾನಾದ ಸಹೋದ್ಯೋಗಿಯೊಂದಿಗಿನ ವಿವಾದ ಅವರ ಕೊಲೆಗೆ ಕಾರಣವಾಯಿತು. ಪ್ರಕರಣದ ಆರೋಪಿ ಕೂಡ ತನ್ನ ಕತ್ತನ್ನು ಸೀಳಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಸನಲ್ ಅವರ ಶವವನ್ನು ಹುಫೂಫ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಸನಲ್ ಘಾನ ಮೂಲದ ವ್ಯಕ್ತಿಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ, ಇದೀಗ ಆತನ ಒಳ್ಳೆತನಕ್ಕೆ ಜೀವವನ್ನು ಕಳೆದುಕೊಳ್ಳುವಂತಾಗಿದೆ.
ಇಡುಕ್ಕಿಯ ಕರಣಪುರಂನ ವಿಷ್ಣು (29) ಎಂಬುವರನ್ನು ಶಾರ್ಜಾದ ಅಬು ಶಾಗರಾದಲ್ಲಿ ಆಫ್ರಿಕನ್ನರು ಥಳಿಸಿ ಕೊಲೆಮಾಡಿದ್ದಾರೆ. ಕ್ಷೌರಿಕನ ಅಂಗಡಿ ಉದ್ಯೋಗಿಯಾಗಿದ್ದ ವಿಷ್ಣು ತನ್ನ ನಿವಾಸದಲ್ಲಿರುವ ವೇಳೆ ಆಫ್ರಿಕನ್ನರ ಮಧ್ಯೆ ನಡೆದ ಘರ್ಷಣೆಯಲ್ಲಿ ಸಿಲುಕಿದ್ದಾರೆ ಎಂದು ಸಹೋದ್ಯೋಗಿಗಳು ಹೇಳುತ್ತಾರೆ.
ಮಂಗಳವಾರ ರಜಾದಿನವಾದ್ದರಿಂದ ಅವರು ಕೆಲಸಕ್ಕೆ ಹೋಗಿರಲಿಲ್ಲ. ಈ ಘಟನೆ ಮಧ್ಯಾಹ್ನ ನಿವಾಸದಲ್ಲಿ ನಡೆದಿದೆ. ಶವವನ್ನು ಶಾರ್ಜಾ ಶವಾಗಾರಕ್ಕೆ ವರ್ಗಾಯಿಸಲಾಗಿದ್ದು, ಘಟನೆ ಕುರಿತು ಶಾರ್ಜಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.