ಸುಳ್ಯ :ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ಎಸ್ ಎಫ್, ಎಸ್ ವೈ ಎಸ್, ಕೆಸಿಫ್ ಒಳಗೊಂಡ ಸಹಾಯ್ ತಂಡದಿಂದ ಸಂಪಾಜೆ ಗ್ರಾಮ ಪಂಚಾಯತ್ ಬಹುತೇಕ ಕಡೆಗಳಲ್ಲಿ ಮತ್ತು ಕೊಡಗು ಸಂಪಾಜೆ, ಕೊಯನಾಡು ಪ್ರದೇಶದ ಪೊಲೀಸ್ ಠಾಣೆ ಹಾಗು ಸರ್ಕಾರಿ ಆಸ್ಪತ್ರೆ, ಚರ್ಚ್, ದೇವಸ್ಥಾನ, ಮಸೀದಿ ಸೇರಿದಂತೆ ಹಲವಾರು ಕಡೆ ಸ್ಯಾನಿಟೈಸ್ ಮಾಡಲಾಯಿತು.
ಕಲ್ಲುಗುಂಡಿ ಪೊಲೀಸ್ ಠಾಣೆ ಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ರವರು ಉದ್ಘಾಟಿಸಿ ಸಹಾಯ್ ತಂಡದ ಕಾರ್ಯಾಚರಣೆಯನ್ನು ಶ್ಲಾಘಿಸುತ್ತಾ ಹುರಿತುಂಬಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸ್ಯಾನಿಟೈಸರ್ ಸಿಂಪಡಣೆಗೆ ಸಾಥ್ ನೀಡಿ ಪಂಚಾಯತ್ ಸದಸ್ಯರಾದ ಪಿ ಕೆ ಅಬುಶಾಲಿ ಗೂನಡ್ಕ ರವರು ಮಾತನಾಡಿ ಸಹಾಯ್ ತಂಡವನ್ನು ಪ್ರಶಂಸಿಸಿದರು.
ನೆಲ್ಲಿಕುಮೇರಿ ಪರಿಸರದಲ್ಲಿ ಸಿ ಆರ್ ಕಾಲನಿಯ ಬಹುತೇಕ ಕಡೆಗಳಲ್ಲಿ ಅಚ್ಚುಕಟ್ಟಾಗಿ ಸ್ಯಾನಿಟೈಸ್ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಎಸ್ ಕೆ ಹನೀಫ, ಮತ್ತು ರಾಜು ಉಪಸ್ಥಿತರಿದ್ದರು.
ನಂತರ ಕೆನರಾ ಬ್ಯಾಂಕ್ ಕಲ್ಲುಗುಂಡಿ, ಕೃಷಿ ಪತ್ತಿನ ಸಹಕಾರಿ ಸಂಘ ಕಲ್ಲುಗುಂಡಿ, ಅಂಗಡಿ ಮುಂಗಟ್ಟುಗಳು, ಸಾರ್ವಜನಿಕ ಸ್ಥಳಗಳು, ಬಸ್ ತಂಗುದಾಣ ಸೇರಿದಂತೆ ಹಲವು ಕಡೆಗಳಲ್ಲಿ ಸ್ಯಾನಿಟೈಸ್ ಮಾಡಲಾಯಿತು.
ಸಂಪಾಜೆ ಗೇಟ್ ಮತ್ತು ಪೊಲೀಸ್ ಠಾಣೆ, ಸಂಪಾಜೆ ಸರಕಾರಿ ಆಸ್ಪತ್ರೆ ಗಳಲ್ಲಿ ಸ್ಯಾನಿಟೈಸ್ ಮಾಡಲಾಯಿತು ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕ ಮತ್ತು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಶವಾದ್ ಗೂನಡ್ಕ ಉಪಸ್ಥಿತರಿದ್ದು ಸಹಾಯ್ ತಂಡದ ಕಾರ್ಯವೈಖರಿಯನ್ನು ಹೊಗಳಿದರು. ನಂತರ ಇಡೀ ಸಹಾಯ್ ತಂಡಕ್ಕೆ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದರು.
ದೊಡ್ಡಡ್ಕ ಕಾಲೋನಿ, ರಾಜರಾಂಪುರ ಶಾಲೆ, ಅಂಗನವಾಡಿ, ಗೂನಡ್ಕ ಮಸೀದಿ ಪರಿಸರ, ದರ್ಕಾಸ್ ಅಂಗನವಾಡಿ, ನರ್ಸ್ ಕ್ವಾಟ್ರಸ್ ದರ್ಕಾಸ್ ಹಾಗೂ ಹಲವಾರು ಕಡೆ ಸ್ಯಾನಿಟೈಸ್ ಮಾಡಲಾಯಿತು.
ಬೀಜದಕಟ್ಟೆ ಇಂಡಸ್ಟ್ರೀಸ್ ಬಳಿ ಸ್ಯಾನಿಟೈಸ್ ಮಾಡುವ ಸಂದರ್ಭ ರಹೀಮ್ ಬೀಜದಕಟ್ಟೆ ಮಾತನಾಡಿ ಸಹಾಯ್ ತಂಡಕ್ಕೆ ಬೀಜದಕಟ್ಟೆ ಕುಟುಂಬದ ಪರವಾಗಿ ಶುಭ ಹಾರೈಸಿದರು.
ಸ್ಯಾನಿಟೈಸ್ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುರ್ರಹ್ಮಾನ್ ಮೊಗರ್ಪಣೆ, ಸಹಾಯ್ ಸುಳ್ಯ ಸರ್ಕಲ್ ಡೈರೆಕ್ಟರ್ ಎ ಎಂ ಫೈಝಲ್ ಝುಹ್’ರಿ, ಎಸ್ ಎಸ್ ಎಫ್ ಗೂನಡ್ಕ ಶಾಖೆ ಇದರ ಅಧ್ಯಕ್ಷರಾದ ಜಾಬಿರ್ ಗೂನಡ್ಕ, ನೌಶಾದ್ ಕೆರೆಮೂಲೆ, ಅಶ್ರಫ್ ಕೊಯನಾಡು, ಲತೀಫ್ ಉಸ್ತಾದ್ ಕೊಯನಾಡ್, ಹನೀಫ್ ಝೈನಿ ಗೂನಡ್ಕ, ಉಮ್ಮರ್ ಪುತ್ರಿ ಗೂನಡ್ಕ ಸಲೀಕ್ ಕಲ್ಲುಗುಂಡಿ, ಸ್ವಾದಿಕ್ ಕಲ್ಲುಗುಂಡಿ, ಹಾರಿಸ್ ಝಮ್ ಝಮ್ ಗೂನಡ್ಕ , , ಉಬೈಸ್, ಉನೈಸ್, ಇಜಾಝ್, ಇಶಾಕ್, ಸಿದ್ದಿಕ್ ಗೂನಡ್ಕ, ಅಜರುದ್ದೀನ್, ಅಯ್ಯುಬ್, ಅಬ್ದುಲ್ಲ ಜಿ ಎಂ, , ನಜಾತ್ ಕಲ್ಲುಗುಂಡಿ ಮುಂತಾದವರು ಕಾರ್ಯಕ್ರಮದುದ್ದಕ್ಕೂ ಸಾಥ್ ನೀಡಿ ಸಹಕರಿಸಿದರು.