janadhvani

Kannada Online News Paper

ವಿದ್ಯಾರ್ಥಿ ನಾಯಕರು 250 ದಿನಗಳು ಅನ್ಯಾಯವಾಗಿ ಜೈಲಿನಲ್ಲಿ: ಜಿಲ್ಲಾದ್ಯಂತ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

‍ಪುತ್ತೂರು : ಉತ್ತರಪ್ರದೇಶದಲ್ಲಿ ನಡೆದ ಮನಿಷಾ ಎಂಬ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು, ಬಾಲಕಿಯ ಮನೆಗೆ ಭೇಟಿ ನೀಡಲು ತೆರಳಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ನಾಯಕರಾದ ಆತಿಕುರ್ರಹ್ಮಾನ್,ಮಸೂದ್ ಹಾಗೂ ಪತ್ರಕರ್ತ ಸಿದ್ದೀಕ್ ಕಪ್ಪನ್ , ಆಲಂ ಅದೇ ರೀತಿ ಇದೇ ಪ್ರಕರಣವನ್ನು ನೆಪವಾಗಿರಿಸಿ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್ ನ್ನು ಕೂಡ ಅನ್ಯಾಯವಾಗಿ ಬಂಧಿಸಿ ಇಂದಿಗೆ 250 ದಿನಗಳಾಗಿದ್ದು, ಇದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಕರೆ ನೀಡಿದ ಪ್ರತಿಭಟನೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಕೊಡಿಪ್ಪಾಡಿ ಮತ್ತು ಸುಳ್ಯ ಎಂಬ ಸ್ಥಳಗಳಲ್ಲಿ ಪ್ರತಿಭಟನೆ ನಡೆಯಿತು.

ಈ ಅಕ್ರಮ ಬಂಧನದಿಂದ ವಿದ್ಯಾರ್ಥಿ ನಾಯಕರನ್ನು,ಪತ್ರಕರ್ತರನ್ನು ಬಿಡುಗಡೆಗೊಳಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಬೆಳ್ಳಾರೆ, ಜಿಲ್ಲಾ ಕಾರ್ಯದರ್ಶಿ ಮುಸ್ತಾಫಾ ಕೊಡಿಪ್ಪಾಡಿ, ಜಿಲ್ಲಾ ಸಮಿತಿ ಸದಸ್ಯರಾದ ಸುಹೈಲ್ ಸುಳ್ಯ, ಆರಿಫ್ ತಂಬುತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com