SSF ದಕ್ಷಿಣ ಕನ್ನಡ ಈಷ್ಟ್ ಜಿಲ್ಲೆಯ ವತಿಯಿಂದ ಮಹಾನುಭಾವರಾದ ಝೈನುದ್ದೀನ್ ಮಖ್ದೂಮ್ ರಲಿಯಲ್ಲಾಹು ಅನ್ಹುರವರ ಹೆಸರಿನಲ್ಲಿ “ಮಖ್ದೂಮಿಯಾ ಸಮ್ಮಿಟ್” ಎಂಬ 3 ದಿನಗಳ “online ಮುತಅಲ್ಲಿಮ್ ಸಂಗಮ” 2021 ಜೂನ್ 17,18,19 ರಂದು Youtube ಚಾನೆಲ್ ನಲ್ಲಿ ನಡೆಯಲಿದೆ.
ಜೂನ್ 17, ಗುರುವಾರದಂದು ಸಂಜೆ 4.30 ಯಿಂದ 6 ಗಂಟೆಗಳ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ತೋಕೆ ಮುಹ್ಯದ್ದೀನ್ ಕಾಮಿಲ್ ಸಖಾಫಿ ಉಸ್ತಾದ್ “ವಿಧ್ವಾಂಸರ ಜೀವನ” ಎಂಬ ವಿಷಯದಲ್ಲಿ ಮಾತನಾಡುವರು. ಜೂನ್ 18 ರಂದು ರಾತ್ರಿ 7.30-8.30pm ರ ವರೆಗೆ ನಡೆಯುವ ಎರಡನೇ ದಿನದ ತರಬೇತಿಯಲ್ಲಿ ರಾಜ್ಯ SYS ನೇತಾರರಾದ GM ಮುಹಮ್ಮದ್ ಕಾಮಿಲ್ ಸಖಾಫಿ ಉಸ್ತಾದರು “ದಅವಾ ಸಂಘಟನೆಯಲ್ಲಿ ಸಕ್ರಿಯತೆ ಎಂಬ ವಿಷಯದಲ್ಲಿ ಮಾತನಾಡುವರು.
ಹಾಗೂ ಜೂನ್ 19 ರ ಮೂರನೇ ದಿನದಂದು ರಾತ್ರಿ 8-10 ರವರೆಗೆ “ಇಮಾಂ ಗಝ್ಝಾಲಿ ರ.ಅ ವೀಕ್ಷಣೆಯಲ್ಲಿ ಮುತ ಅಲ್ಲಿಮರು” ಎಂಬ ವಿಷಯದಲ್ಲಿ ಅಂಕಣಕಾರ ಇಸ್ಮಾಯಿಲ್ ಸಅದಿ ಅಲ್ ಅಫ್ಲಲಿ ಮಾಚಾರ್ ಉಸ್ತಾದರು ತರಬೇತಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಈಷ್ಟ್ ಜಿಲ್ಲಾಧ್ಯಕ್ಷ GK ಅಮ್ಜದಿ ಸುಳ್ಯ,ಅಸ್ಸಯ್ಯದ್ ಶಿಹಾಬುದ್ದೀನ್ ತಙಳ್ ಮದಕ, ಖಾಸಿಂ ಮದನಿ ಕರಾಯ,SSF ರಾಜ್ಯ ಅಧ್ಯಕ್ಷ ಅಬ್ದುಲ್ ಲತೀಫ್ ಸಅದಿ,ಶೈಖುನಾ ಕನ್ಯಾನ ಉಸ್ತಾದ್,KM ಮುಸ್ತಫ ನಯೀಮಿ,ಹಾಫಿಲ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್,
ಮಹಮ್ಮದ್ಅಲಿ ತುರ್ಕಳಿಕೆ, ಅಬ್ದುರ್ರಝಾಕ್ ಸಅದಿ ಕೊಡಿಪ್ಪಾಡಿ, ಜೀರ್ಮುಕಿ ಸಖಾಫಿ ಮುಂತಾದ ಪ್ರಮುಖ ನಾಯಕರು ಬಾಗವಹಿಸಲಿದ್ದಾರೆ.