ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿ ಆಯೋಜಿಸುವ FIX-186 ತರಬೇತಿ ಶಿಬಿರವು ಇಂದಿನಿಂದ(14,15,16) ಮೂರು ದಿನಗಳ ಕಾಲ ಆನ್ಲೈನ್ ಮೂಲಕ ನಡೆಯಲಿದೆ.
ಜಿಲ್ಲೆ ಡಿವಿಷನ್ ಸೆಕ್ಟರ್ ಮಟ್ಟದಲ್ಲಿ ಆಯ್ಕೆಯಾದ 186 ನಾಯಕರಿಗೆ ಸೀಮಿತ ನಾಯಕರಿಗೆ ನಡೆಯುವ ತರಬೇತಿ ಶಿಬಿರದಲ್ಲಿ ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಅಧ್ಯಕ್ಷತೆ ವಹಿಸಲಿದ್ದು.
ಕರ್ನಾಟಕ ರಾಜ್ಯ ಎಸ್ ವೈ ಎಸ್‌ನ ಸಾಂತ್ವನ ವಿಭಾಗದ ಚೇರ್ಮನ್ ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ ರವರು ಮೂರು ದಿನಗಳಲ್ಲೂ ವಿವಿಧ ವಿಷಯಗಳ ಕುರಿತು ತರಗತಿ ನಡೆಸಿಕೊಡಲಿದ್ದಾರೆ.
ಸಂಘಟನೆಯ ಮುಂದಿನ ಚಟುವಟಿಕೆಗಳಿಗೆ ನಾಯಕರನ್ನು ಸಜ್ಜುಗೊಳಿಸಲು ಈ ಕಾರ್ಯಗಾರ ಸಹಾಯಕವಾಗಲಿದೆ ಎಂದು ಎಸ್ ಎಸ್ ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.