janadhvani

Kannada Online News Paper

ಹಜ್:60 ಸಾವಿರ ಮಂದಿಗೆ ಅವಕಾಶ- ವಿದೇಶೀ ಯಾತ್ರಿಕರಿಗೆ ಅವಕಾಶವಿಲ್ಲ

ರಿಯಾದ್: ಕೋವಿಡ್ ಸನ್ನಿವೇಶದಲ್ಲಿ, ವಿದೇಶಿ ಯಾತ್ರಿಕರಿಗೆ ಈ ಬಾರಿಯೂ ಹಜ್ ನಿರ್ವಹಿಸಲು ಅವಕಾಶವಿಲ್ಲ.ಸೌದಿ ಅರೇಬಿಯಾದ ಹಜ್‌ ಮತ್ತು ಉಮ್ರಾ ಸಚಿವಾಲಯ ಈ ಸಂಬಂಧ ಪ್ರಕಟನೆ ನೀಡಿರುವುದಾಗಿ ಸೌದಿ ಪ್ರಸ್‌ ಏಜೆನ್ಸಿ ವರದಿ ಮಾಡಿದೆ.

ಸೌದಿ ಅರೇಬಿಯಾದಲ್ಲಿ ವಾಸಿಸುವ ವಿದೇಶಿಯರು ಮತ್ತು ದೇಶೀಯ ಪ್ರಜೆಗಳಿಗೆ ಮಾತ್ರ ಹಜ್ ನಿರ್ವಹಿಸಲು ಅವಕಾಶವಿದೆ. ಈ ಬಾರಿ 60,000 ಜನರಿಗೆ ಮಾತ್ರ ಹಜ್ ಮಾಡಲು ಅವಕಾಶವಿದೆ.ಕಳೆದ ವರ್ಷವೂ ಕೊರೊನಾ ಕಾರಣದಿಂದ ಹಜ್‌ ಯಾತ್ರೆಯಲ್ಲಿ ಅತ್ಯಲ್ಪ ಮಂದಿಗೆ ಭಾಗಿಯಾಗಲು ಅವಕಾಶ ನೀಡಲಾಗಿತ್ತು.

ಈ ಹಿಂದೆ ಕೇಂದ್ರ ಹಜ್ ಮಂತ್ರಿ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಹಜ್ ವಿಚಾರದಲ್ಲಿ ಸೌದಿ ನಿರ್ಧಾರವನ್ನು ಸ್ವೀಕರಿಸುವುದಾಗಿ ಹೇಳಿದ್ದರು. “ಎರಡೂ ದೇಶಗಳ ಜನರ ಆರೋಗ್ಯವು ಅತ್ಯಂತ ಮಹತ್ವದ್ದಾಗಿದೆ” ಎಂದು ಅವರು ಹೇಳಿದರು.

ಈ ವರ್ಷದ ಜುಲೈ ಮಧ್ಯಭಾಗದಲ್ಲಿ ಆರಂಭವಾಗಲಿರುವ ಹಜ್‌ ಯಾತ್ರೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡಿರುವ 18ರಿಂದ 65 ವರ್ಷದೊಳಗಿನವರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

error: Content is protected !! Not allowed copy content from janadhvani.com