SKSSF ಕೊಡಗು ಜಿಲ್ಲಾ ಸಮಿತಿಯ ನಿರ್ದೇಶನದಂತೆ, ವಿಜ್ಞಾನ, ವಿನಯ, ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ವಿದ್ಯಾರ್ಥಿ ಸಂಘಟನೆ SKSSF ತನ್ನ ಕಾರ್ಯವೈಖರಿ ಗಳನ್ನು ವಿಸ್ತರಿಸಲು, ಸೋಮವಾರಪೇಟೆ ಶಾಖೆ ನೂತನ ಸಮಿತಿಯನ್ನು ರಚಿಸಲಾಯಿತು. ಕೋವಿಡ್ ಕಾರಣದಿಂದಾಗಿ ಆನ್ಲೈನ್ ಮೂಲಕ ನಡೆದ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮತಿಯೊಂದಿಗೆ ನೂತನ ಅಧ್ಯಕ್ಷರಾಗಿ ಜನಾಬ್ ರಾಹಿಲ್ ಬಶೀರ್ ರವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಗಳಾಗಿ ಅಬ್ದುಲ್ ನೌಶಾದ್, ಕೋಶಾಧಿಕಾರಿಯಾಗಿ
ಅಬ್ದುಲ್ ರಝಾಕ್ ರವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ರಶೀದ್ ಅಬ್ದುಲ್ಲಾ, ಸಹ ಕಾರ್ಯದರ್ಶಿಯಾಗಿ ಸಮದ್ ಕರ್ಕಳ್ಳಿ ಆಯ್ಕೆಯಾದರು. ಜೊತೆಗೆ SKSSF ಅಧೀನದಲ್ಲಿ ಕಾರ್ಯನಿರ್ವಹಿಸುವ ವಿಖಾಯ ಸಮಿತಿಯ ಚೇರ್ಮಾನ್ ಆಗಿ ಅಬ್ದುಲ್ ರಝಾಕ್ ಆಲೆಕಟ್ಟೆ ಹಾಗೂ ಇಬಾದ್ ಸಮಿತಿಯ ಮುಖ್ಯಸ್ಥರಾಗಿ ಹುಸೈನ್ ಫೈಝಿ ಬಜೆಗುಂಡಿ ಹಾಗೂ ಟ್ರೆಂಡ್, ಸಹಚಾರಿ, ಸರ್ಗಲಯ, ತ್ವಲಬಾ ವಿಂಗ್ ಮುಖ್ಯಸ್ಥರನ್ನು ಕೂಡ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವು SKSSF ಕೊಡಗು ಜಿಲ್ಲಾ ಸಮಿತಿಯ ಸದಸ್ಯರಾದ ಉಸ್ತಾದ್ ನಾಸಿರ್ ದಾರಿಮಿ ಕೂಡಿಗೆರವರ ಮೇಲುಸ್ತುವಾರಿಯಲ್ಲಿ ನಡೆಯಿತು. ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರುಗಳಿಗೆ ಉಸ್ತಾದ್ ರವರು ಅಭಿನಂದನೆಗಳನ್ನು ಸಲ್ಲಿಸಿ, ಶುಭ ಕೋರಿದರು.