janadhvani

Kannada Online News Paper

ಧಾರ್ಮಿಕ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವ ಎಲ್ಲಾ ಸಿಬ್ಬಂದಿಗಳಿಗೂ ಪರಿಹಾರ ದೊರಕಬೇಕು: ಕೆಸಿಎಫ್

ಮೇ 23 : ಕರ್ನಾಟಕದಲ್ಲಿ ಕೋವಿಡ್ ಎರಡನೇ ಅಲೆಯಿಂದಾಗಿ ಲಾಕ್ ಡೌನ್ ಘೋಷಣೆಯಾದ ಕಾರಣದಿಂದ ಧಾರ್ಮಿಕ ಕೇಂದ್ರಗಳು ಮುಚ್ಚಲ್ಪಟ್ಟಿದೆ. ಇದರಲ್ಲಿ ಸೇವೆ ಸಲ್ಲಿಸುವ ಧರ್ಮ ಗುರುಗಳು ಮತ್ತು ಸಿಬ್ಬಂದಿಗಳು ಕೆಲಸವನ್ನು ಕಳೆದುಕೊಂಡಿದ್ದಾರೆ. ಸರಕಾರವು ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಯಲ್ಲಿ ಸೇವೆಯಲ್ಲಿದ್ದ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಈಗಾಗಲೇ ಧನ ಸಹಾಯ ಮತ್ತು ಕಿಟ್ ವಿತರಿಸುವುದಾಗಿ ಘೋಷಿಸಿದೆ. ಸರಕಾರದ ಈ ಕ್ರಮವು ಸ್ವಾಗತಾರ್ಹವಾಗಿದೆ. ಆದರೆ ಇದರ ಜೊತೆಗೆ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಇತರ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳಲ್ಲಿ ಸೇವೆಸಲ್ಲಿಸುವ ಸರಕಾರಿ ಅದೀನದಲ್ಲಿ ನೊಂದಾಯಿತ ಎಲ್ಲಾ ಧರ್ಮ ಗುರುಗಳು ಮತ್ತು ಸಿಬ್ಬಂದಿಗಳಿಗೆ ತಾರತಮ್ಯವಿಲ್ಲದೆ ಪರಿಹಾರ ಧನ ಮತ್ತು ದೈನಂದಿನ ಆಹಾರ ಸಾಮಗ್ರಿಗಳ ಕಿಟ್ ವಿತರಿಸಬೇಕಾಗಿದೆ. ಸರಕಾರದ ಪರಿಹಾರ ಪ್ರತಿಯೊಂದು ವರ್ಗದ ಜನರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ತಕ್ಷಣ ಸ್ಪಂದಿಸಬೇಕೆಂದು ಮುಖ್ಯಮಂತ್ರಿಗಳನ್ನು ಈ ಮೂಲಕ ಒತ್ತಾಯಿಸುತ್ತಿದ್ದೇವೆ.

ಅದೇ ರೀತಿ ಕರ್ನಾಟಕ ವಕ್ಫ್ ಬೋರ್ಡ್ ಅಧೀನದಲ್ಲಿರುವ ಎಲ್ಲಾ ಮಸ್ಜಿದ್ ಇಮಾಮ್ ಮತ್ತು ಮುಅಝ್ಯಿನ್ ಗಳಿಗೆ ತಕ್ಷಣ ವಕ್ಫ್ ಬೋರ್ಡ್ ಸರಕಾದ‌ ಗಮನಕ್ಕೆ ತಂದು ಪರಿಹಾರ ದೊರಕಿಸಿಕೊಡಬೇಕೆಂದು ವಕ್ಫ್ ಬೋರ್ಡ್ ಸದಸ್ಯರಾದ ಮೌಲಾನಾ ಶಾಫಿ ಸಅದಿ ಯವರ ಮುಖಾಂತರ ಒತ್ತಾಯಪಡಿಸುತ್ತಿದ್ದೇವೆ ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ DP ಯೂಸುಫ್ ಸಖಾಫಿ ಬೈತಾರ್ ರವರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com