janadhvani

Kannada Online News Paper

ಈ ವರ್ಷ ವಿದೇಶಿ ಯಾತ್ರಾರ್ಥಿಗಳಿಗೂ ಹಜ್ಜ್ ನಿರ್ವಹಿಸಲು ಅವಕಾಶ

ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಹಜ್ಜ್ ನಿರ್ವಹಿಸಲು ಸೌದಿ ಅರೇಬಿಯಾದಲ್ಲಿದ್ದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ವರ್ಷ ವಿದೇಶಿಗಳಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಹಜ್ಜ್ & ಉಮ್ರಾ ಮಂತ್ರಾಲಯ ತಿಳಿಸಿರುವುದಾಗಿ ಅಲ್-ವತನ್ ಪತ್ರಿಕೆ ವರದಿ ಮಾಡಿದೆ.

ಈಗ ಕೋವಿಡ್ ಸುರಕ್ಷಿತ ನಿಯಮಗಳನ್ನು ಪಾಲಿಸಿ ಉಮ್ರಾ ಹಾಗೂ ಮಸ್ಜಿದ್ ಹರಮ್ ನಲ್ಲಿ ಪ್ರಾರ್ಥನೆಗಳು ಸುಗಮವಾಗಿ ನಡೆಯುತ್ತಿದೆ. ಇದೇ ರೀತಿ ಕೋವಿಡ್ ಸುರಕ್ಷಿತ ನಿಯಮಗಳನ್ನು ಪಾಲಿಸಿ ಈ ವರ್ಷ ವಿದೇಶದಿಂದಲೂ ಯಾತ್ರಾರ್ಥಿಗಳು ಹಜ್ಜ್ ನಿರ್ವಹಿಸಲು ಬರಲು ಅವಕಾಶ ಕಲ್ಪಿಸಲಾಗುವುದು.

ಹಜ್ಜ್ ಯಾತ್ರಾರ್ಥಿಗಳು ಪಾಲಿಸಬೇಕಾದ ಸುರಕ್ಷಿತ ನಿಯಮಾವಳಿ ಹಾಗೂ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದೂ ಮಂತ್ರಾಲಯದಿಂದ ತಿಳಿಸಲಾಗಿದೆ.