ಅನಿವಾಸಿ ಕನ್ನಡಿಗರಿಗಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ವತಿಯಿಂದ ಹಲವಾರು ಸಾಮಾಜಿಕ ಸೇವೆಗಳನ್ನು ಆಯೋಜಿಸಲ್ಪಡುತ್ತಿದೆ. ಕೋವಿಡ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಯುಎಇ ಆರೋಗ್ಯ ಇಲಾಖೆ ಕೈಗೊಂಡ ಎಲ್ಲಾ ಯೋಜನೆಗಳೊಂದಿಗೆ ಕೆಸಿಎಫ್ ಸಂಪೂರ್ಣ ಸಹಕಾರ ನೀಡಿತ್ತು. ಲಾಕ್ ಡೌನ್ ಸಂಧರ್ಭದಲ್ಲಿ ಅನಿವಾಸಿ ಕನ್ನಡಿಗರ ಪಾಲಿಗೆ ಆಶಾದಾಯಕವಾಗಿ ಗುರುತಿಸಿಕೊಂಡ ಕೆಸಿಎಫ್ ಉಚಿತ ಆಹಾರ ಕಿಟ್, ಆಂಬುಲೆನ್ಸ್ ವ್ಯವಸ್ಥೆ, ಮೆಡಿಕಲ್ ಸೇವೆ, ಸೋಂಕಿತರಿಗೆ ಐಸೋಲೇಷನ್ ವ್ಯವಸ್ಥೆ, ಚಾರ್ಟರ್ ಫ್ಲೈಟ್ ಮೊದಲಾದ ಸೇವೆಗಳನ್ನು ಒದಗಿಸಿಕೊಟ್ಟಿದೆ.
ಯುಎಇ ಯಾದ್ಯಂತ ಕೋವಿಡ್ ವ್ಯಾಕ್ಸಿನ್ ಉಚಿತವಾಗಿಯೇ ನೀಡುತ್ತಿದೆ. ಇದರಿಂದ ಕನ್ನಡಿಗರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸಂಘಟನಾ ವತಿಯಿಂದ ವ್ಯಾಕ್ಸಿನ್ ವ್ಯವಸ್ಥೆಯನ್ನು ಎಲ್ಲಾ ಎಮಿರೇಟ್ಸ್ ಗಳಲ್ಲೂ ಹಮ್ಮಿಕೊಂಡಿದೆ. ಯುಎಇ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಮೇ 23 ಮತ್ತು 27ನೇ ತಾರೀಕಿನಂದು ಕೋವಿಡ್ ವ್ಯಾಕ್ಸಿನ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಕನ್ನಡಿಗರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘಟಕರು ಕೋರಿಕೊಂಡಿದ್ದಾರೆ.
ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿಕೊಂಡಿರುವ ಕೋವಿಡ್ ತಡೆಗಟ್ಟಲು ಯುಎಇ ಆರೋಗ್ಯ ಇಲಾಖೆ ಅತ್ಯಂತ ವ್ಯವಸ್ಥಿತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ದೇಶ ವಿದೇಶ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಉಚಿತವಾಗಿಯೇ ವ್ಯಾಕ್ಸೀನ್ ನೀಡಿ ಕೋವಿಡ್ ಮುಕ್ತ ಯುಎಇ ಯನ್ನಾಗಿ ಪರಿವರ್ತಿಸಲು ಪಣತೊಟ್ಟು ಹೋರಾಡುತ್ತಿದೆ. ಈ ಹೋರಾಟದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕಾಗಿರುವುದು ನಮ್ಮ ಕರ್ತವ್ಯ.
ಕೆಸಿಎಫ್ ಯುಎಇ ಹಮ್ಮಿಕೊಂಡ ಉಚಿತ ವ್ಯಾಕ್ಸೀನ್ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ತಾವು ಮಾಡಬೆಕಾಗಿರುವುದು ಈ ಕೆಳಗೆ ನೀಡಿದ ಲಿಂಕ್ ಮೂಲಕ ನಿಮ್ಮ ಹೆಸರು ವಿಳಾಸ ಮತ್ತು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ ನೀಡಿ ನೊಂದಾಯಿಸಿಕೊಳ್ಳಬಹುದು.