janadhvani

Kannada Online News Paper

ಜಿಲ್ಲಾಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಿಸಿ- ಪ್ರಧಾನಿ

ಬೆಂಗಳೂರು: ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ನಡೆಸಿ, ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚಿಸಿದ್ದಾರೆ. ಬೇರೆ ಬೇರೆ ಕಡೆ ತೆಗೆದುಕೊಂಡಿರುವ ಕ್ರಮಗಳನ್ನು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಕೊರೋನಾ ಸೋಂಕು ಅತಿ ಹೆಚ್ಚು ಹರಡುತ್ತಿದೆ. ಇದನ್ನು ಹೇಗೆ ನಿಯಂತ್ರಿಸಬೇಕೆಂದು ವಿವರಿಸಿದರು. ಗೌರವ್ ಗುಪ್ತಾ ಬೆಂಗಳೂರಿನ ಪರಿಸ್ಥಿತಿ ವಿವರಿಸಿದರು.

ಖಾಸಗಿ‌ಮೆಡಿಕಲ್ ಕಾಲೇಜುಗಳಲ್ಲಿ ವ್ಯವಸ್ಥೆ ಬಗ್ಗೆ ತಿಳಿಸಿದರು. ಪ್ರಧಾನಿಯವರು ಗ್ರಾಮೀಣ ಭಾಗದ ಬಗ್ಗೆ ಹೆಚ್ಚು ಮಾತನಾಡಿದರು. ಅಲ್ಲಿ ಸೋಂಕು ತಡೆಯುವ ಬಗ್ಗೆ ತಿಳಿಸಿದರು. ಜನರ ಪಾಲ್ಗೊಳ್ಳುವಿಕೆ ಬಗ್ಗೆಯೂ ತಿಳಿಸಿದರು. ಅಲ್ಲಿ ಟಾಸ್ಕ್ ಪೋರ್ಸ್ ಕಮಿಟಿ ಮಾಡಲಾಗಿದೆ. ಅಲ್ಲಿ ಅಧಿಕಾರಿಗಳಿದ್ದರೆ ಸಾಲದು. ಬೇರೆ ಬೇರೆ ಸ್ವಯಂಸೇವಕರನ್ನು ಸೇರಿಸಬೇಕೆಂದಿದ್ದಾರೆ. ಪ್ರೈಮರಿ, ಸೆಕಂಡರಿ ಕಾಂಟ್ಯಾಕ್ಟ್ ಗಳನ್ನ ಪತ್ತೆ ಹಚ್ಚಬೇಕು. ಇದರ ಬಗ್ಗೆ ನಮಗೆ ಸೂಚಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪ್ರಧಾನಿ ಮೋದಿ ಅವರೊಂದಿಗೆ ವಿಡಿಯೋ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ ಅವರು, ಜಿಲ್ಲಾಧಿಕಾರಿಗಳು ಫೀಲ್ಡ್ ಕಮಾಂಡರ್ ಆಗಿ ಕೆಲಸ ಮಾಡಬೇಕು. ಆದೇಶವನ್ನು ಸ್ಥಳೀಯ ಮಟ್ಟದಲ್ಲಿ ಕಾರ್ಯಗತ ಮಾಡಬೇಕು. ಇದನ್ನು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.

ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಸೋಂಕು ನಿಯಂತ್ರಿಸಿ ಎಂದಿದ್ದಾರೆ. ವೈದ್ಯಕೀಯ ಸೌಲಭ್ಯಗಳನ್ನ ಮತ್ತಷ್ಟು ಹೆಚ್ಚಿಸಿಕೊಳ್ಳಬೇಕಿದೆ. ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚಿಸಿದ್ದಾರೆ. ಮಧ್ಯಪ್ರದೇಶದ ಗ್ರಾಮೀಣ ಪ್ರದೇಶದಲ್ಲಿ ಸೋಂಕನ್ನು ಚೆನ್ನಾಗಿ ನಿಯಂತ್ರಿಸಲಾಗಿದೆ. ಚೆನ್ನೈನಲ್ಲಿ ಖಾಸಗಿ ಆ್ಯಂಬುಲೆನ್ಸ್ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎಲ್ಲೆಲ್ಲಿ ಒಳ್ಳೆಯ ಕೆಲಸ ಮಾಡ್ತಿದ್ದಾರೆ ಅದನ್ನು ಗಮನಕ್ಕೆ ತಂದಿದ್ದಾರೆ. ಸಮರ್ಥವಾಗಿ ಕೆಲಸ ಮಾಡುವ ನರ್ಸ್‌ಗಳು 1 ವಯಲ್‌ನಲ್ಲಿ 11 ಜನರಿಗೆ ಲಸಿಕೆ ನೀಡುತ್ತಾರೆ. ಒಂದೇ ಒಂದು ಹನಿ ವೇಸ್ಟ್ ಮಾಡಲ್ಲ. ಇಲ್ಲೂ ಅದನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿ ಮೋದಿ ಅವರು ಸೂಚಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಕಾರ್ಟೂನ್‌ಗಳ ಮೂಲಕ ಮಕ್ಕಳ ಮಟ್ಟಕ್ಕೆ ಹೋಗಿ ತಿಳಿಸಬೇಕು. ಇದರ ಬಗ್ಗೆ ಹೆಚ್ಚು ಜಾಗೃತರಿರುವಂತೆ ತಿಳಿಸಿದ್ದಾರೆ. ಲಾಕ್‌ಡೌನ್ ಕುರಿತು ಪ್ರಧಾನಿ ಸಂವಾದದಲ್ಲಿ ಚರ್ಚಿಸಿಲ್ಲ. ಆ ಬಗ್ಗೆ ಸಿಎಂ ಯಡಿಯೂರಪ್ಪ ಅವರೇ ತೀರ್ಮಾನಿಸುತ್ತಾರೆ. ಟಾಸ್ಕ್ ಫೋರ್ಸ್ ಹಾಗೂ ಮಾಧ್ಯಮಗಳ ವರದಿ ಆಧರಿಸಿ ಸಿಎಂ ಸೂಕ್ತ ತೀರ್ಮಾನ ಮಾಡುತ್ತಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಾಳೆ ಬೆಳಗ್ಗೆ 11.30ಕ್ಕೆ ಸಿಎಂ‌ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸುದ್ದಿಗೋಷ್ಟಿಗೂ ಮುನ್ನ ಕೋವಿಡ್ ಉಸ್ತುವಾರಿ ಸಚಿವರ ಸಭೆ ನಡೆಸಿ, ನಾಳೆ ಮಹತ್ವದ ತೀರ್ಮಾನ ಪ್ರಕಟಿಸಲಿದ್ದಾರೆ. ಲಾಕ್‌ಡೌನ್ ವಿಸ್ತರಣೆ ಹಾಗೂ ವಿಶೇಷ ಪ್ಯಾಕೇಜ್ ಬಗ್ಗೆ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಈಗ ಘೋಷಿಸಿರುವ ಲಾಕ್ಡೌನ್ ಇದೇ ತಿಂಗಳ 24ಕ್ಕೆ ಮುಕ್ತಾಯವಾಗಲಿದೆ

error: Content is protected !! Not allowed copy content from janadhvani.com