ಸೌದಿ ಅರೇಬಿಯಾ: ಡಿ.ಕೆ.ಎಸ್.ಸಿ ಕೇಂದ್ರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಹಾಗು ಇನ್ನಿತರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಮರಾ ನಾಯಕ ಹಾಗು ಹಲವಾರು ಸಂಘ ಸಂಸ್ಥೆ ಸ್ಥಾಪನೆಗಳ ಹಿತೈಷಿಯೂ ಆಗಿದ್ದ ಹಾಜಿ ಹಾತಿಂ ಕಂಚಿ ಇವರು ಈದುಲ್ ಫಿತ್ರ್ ದಿನ ಈದ್ ನಮಾಜ್ ಬಳಿಕ ದಮ್ಮಾಮ್ ನಲ್ಲಿ ನಿಧನರಾಗಿದ್ದಾರೆ.
ದಮ್ಮಾಮ್ ನಲ್ಲಿ ಸ್ವಂತ ಹಜ್ ಉಮ್ರ ಟೂರಿಸ್ಟ್ ನಡೆಸುತ್ತಿದ್ದ ಅವರು ಕೊಡುಗೈ ದಾನಿಯೂ ಆಗಿದ್ದರು. ಮ್ರತರು ಹೆಂಡತಿ, ನಾಲ್ಕು ಹೆಣ್ಣು ಮಕ್ಕಳು ಹಾಗು ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಇವರ ಅಕಾಳಿಕ ಮರಣವು ತುಂಬಲಾರದ ನಷ್ಟವಾಗಿದೆ. ಅವರ ಪಾರತ್ರಿಕ ಜೀವನವು ಉತ್ತಮವಾಗಿರಲೆಂದು ಅಲ್ಲಾಹನಲ್ಲಿ ಪ್ರಾರ್ಥಿಸುತ್ತ ಕೆ.ಸಿ.ಎಫ್ ಸೌದಿ ಅರೇಬಿಯಾ ಸಮಿತಿಯ ವತಿಯಿಂದ ಸಂತಾಪವನ್ನು ಸೂಚಿಸಿದೆ.
ಮರಣೋತ್ತರ ಕ್ರೀಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಿ ಹಾಗು ಇತರ ದಾಖಲೆ ಪತ್ರವನ್ನು ತ್ವರಿತ ವೇಗದಲ್ಲಿ ಸರಿಪಡಿಸಿ ಅಂದರೆ ನಿನ್ನೆ ತಾ: ಮೇ 14 ರಂದು ದಮ್ಮಾಮ್ 91 ರಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು.
ಮ್ರತರ ಕುಟುಂಬದವರು, ಡಿ.ಕೆ.ಎಸ್.ಸಿ ಯ ಹಲವಾರು ನಾಯಕರು ಹಾಗು ಕೆ.ಸಿ.ಎಫ್ ನಾಯಕರು ಮತ್ತು ಗೆಳೆಯರು ಅಂತ್ಯಕ್ರೀಯೆಯಲ್ಲಿ ಭಾಗಿಯಾಗಿ ಮ್ರತರಿಗಾಗಿ ದುಆ ನೆರೆವೇರಿಸಲಾಯಿತು.