janadhvani

Kannada Online News Paper

ಶುಭ ಸುದ್ದಿ: ಸೌದಿಗೆ ತೆರಳಲು ಪ್ರತ್ಯೇಕ ಚಾರ್ಟರ್ಡ್ ವಿಮಾನಕ್ಕೆ ಅನುಮತಿ

ಕಾಠ್ಮಂಡು: ನೇಪಾಳದಲ್ಲಿ ಸಿಲುಕಿರುವ ಭಾರತೀಯರಿಗೆ ಸೌದಿ ಅರೇಬಿಯಾಕ್ಕೆ ತೆರಳಲು ಚಾರ್ಟರ್ಡ್ ವಿಮಾನ ಹಾರಾಟಕ್ಕೆ ಅವಕಾಶ ನೀಡಲು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ನಿರ್ಧರಿಸಿದೆ. ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದೆ.

ನೇಪಾಳಕ್ಕೆ ಆಗಮಿಸಿರುವ ಭಾರತೀಯರಿಗೆ ಸೌದಿ ಅರೇಬಿಯಾಕ್ಕೆ ತೆರಳಲು ಕಾಠ್ಮಂಡುವಿನಿಂದ ರಿಯಾದ್ ಅಥವಾ ಜಿದ್ದಾಗೆ ವಿಶೇಷ ಚಾರ್ಟರ್ಡ್ ವಿಮಾನಗಳನ್ನು ಸಜ್ಜುಗೊಳಿಸುವುದಾಗಿ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ತಿಳಿಸಿದೆ.

ಭಾರತೀಯ ರಾಯಭಾರ ಕಚೇರಿಯ ಕೋರಿಕೆಯ ಮೇರೆಗೆ ಈ ಹೊಸ ನಿರ್ಧಾರ. ಆದರೆ ಚಾರ್ಟರ್ಡ್ ವಿಮಾನಗಳಿಗೆ ಸೌದಿ ಸರ್ಕಾರದ ಅನುಮತಿ ಲಭಿಸಬೇಕಿದೆ. ಚಾರ್ಟರ್ಡ್ ಸೇವೆಗಳನ್ನು ನೇಪಾಳ ಏರ್ಲೈನ್ಸ್ ಮತ್ತು ಹಿಮಾಲಯನ್ ಏರ್ಲೈನ್ಸ್ ನಿರ್ವಹಿಸಲಿವೆ.

ವಿಮಾನಯಾನ ಸಂಸ್ಥೆಗಳು ಸೇವೆಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸುವುದಾಗಿ ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಪ್ರಕಟಿಸಿದೆ. ಕೋವಿಡ್ ವಿಸ್ತರಣೆಯ ಬಳಿಕ ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರವು ಅಂತರರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ಈ ತಿಂಗಳ 31 ರವರೆಗೆ ವಿಸ್ತರಿಸಿದೆ.