janadhvani

Kannada Online News Paper

ತೇಜಸ್ವಿ ಸೂರ್ಯ ತಲೆಯಲ್ಲಿರುವ “ಕೋಮು ದ್ವೇಷದ ವೈರಸ್” ಕೊರೋನಾಗಿಂತ ಅಪಾಯಕಾರಿ

ಬೆಂಗಳೂರು, ಮೇ 05:ದೇಶದಲ್ಲಿ ಮಾತ್ರ ರಾಜ್ಯದಲ್ಲೂ ಕೊರೋನಾ ಅಟ್ಟಾಹಾಸ ಸದ್ಯಕ್ಕಂತು ನಿಲ್ಲುವ ಯಾವುದೇ ಸೂಚನೆಗಳು ಕಾಣಿಸುತ್ತಿಲ್ಲ. ಇನ್ನೂ ರಾಜಧಾನಿ ಬೆಂಗಳೂರಂತು ಕೊರೋನಾ ಸಾವುಗಳಿಂದಾಗಿ ಅಕ್ಷರಶಃ ನರಕದಂತೆ ಭಾಸವಾಗುತ್ತಿದೆ. ಒಂದೆಡೆ ಪ್ರತಿದಿನ ಸಾವಿರಾರು ಜನ ಸೋಂಕಿಗೆ ತುತ್ತಾಗುತ್ತಿದ್ದರೆ, ಮತ್ತೊಂದೆಡೆ ಯಾರಿಗೂ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಲಭ್ಯವಾಗುತ್ತಿಲ್ಲ.

ಆದರೆ, ನಗರದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಲು ಬೆಡ್ ಬ್ಲಾಕಿಂಗ್ ದಂಧೆಯೇ ಕಾರಣ ಎಂದು ಸಂಸದ ತೇಜಸ್ವಿ ಸೂರ್ಯ ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ದೂರಿದ್ದರು. ಅಲ್ಲದೆ, ಪ್ರಕರಣದ ಸಂಬಂಧ ಒಂದೇ ಕೋಮಿನ ಜನರ ಹೆಸರನ್ನು ಮಾತ್ರ ಹೆಸರಿಸಿದ್ದರು. ತೇಜಸ್ವಿ ಸೂರ್ಯ ಅವರ ಈ ನಡೆಗೆ ಹಲವೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದು ಕೋಮು ದ್ವೇಷ ಹರಡುವ ಕೃತ್ಯ ಎಂದು ಆರೋಪಿಸಲಾಗಿತ್ತು.

ಇದರ ಬೆನ್ನಿಗೆ ಇಂದು ಟ್ವೀಟ್ ಮೂಲಕ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ಕೊರೋನಾ ಸೋಂಕಿಗಿಂತ ಅಪಾಯಕಾರಿ ಸಂಸದ ತೇಜಸ್ವಿ ಸೂರ್ಯ ಅವರ ತಲೆಯಲ್ಲಿರುವ ಕೋಮು ದ್ವೇಷದ ವೈರಸ್” ಎಂದು ಹೇಳಿದ್ದಾರೆ.

error: Content is protected !! Not allowed copy content from janadhvani.com