ಉತ್ತಮ ಗುಣ ನಡೆತೆಯ ವ್ಯಕ್ತಿತ್ವ ಹೊಂದಿದ್ದ ಇವರು ಸುಮಾರು 7 ವರ್ಷಗಳಿಂದಿಚೆಗೆ ವ್ಯೆಯಕ್ತಿಕ ಕಾರಣಗಳಿಂದ ಊರಿಗೆ ಹೋಗದೆ ಕೆಲಸದಲ್ಲಿ ನಿರ್ವಹಿಸುತ್ತಿದ್ದರು, ಧಿಡೀರಣೆ ಕಾಣಿಸಿಕೊಂಡು ರೋಗದಿಂದ ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದು ಮೊನ್ನೆ ಮರಣ ಹೊಂದಿದರು. ಮ್ರತರು ತಾಯಿ, ಹೆಂಡತಿ ಹಾಗು ಒಬ್ಬ ಮಗನನ್ನು ಅಗಲಿದ್ದಾರೆ.
ಮರಣೋತ್ತರ ಕ್ರೀಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಕೂಡಲೆ ಸ್ಪಂದಿಸಿ ಕಾರ್ಯ ಪ್ರವರ್ತರಾದ ಕೆ.ಸಿ.ಎಫ್ ದಮ್ಮಾಮ್ ಝೋನ್ ಸಾಂತ್ವನ ತಂಡವು ಭಾರತೀಯ ರಾಯಬಾರಿ ಕಛೇರಿ ಹಾಗು ಊರಿನಿಂದ ಬೇಕಾದ ದಾಖಲೆ ಪತ್ರವನ್ನು ತ್ವರಿತ ವೇಗದಲ್ಲಿ ಸರಿಪಡಿಸಿ ಕೇವಲ 1 ದಿವಸಗಳೊಳಗೆ ಅಂದರೆ ತಾ: ಎಪ್ರಿಲ್ 28 ರಂದು ಲುಹರ್ ನಮಾಜಿನ ಬಳಿಕ ದಮ್ಮಾಮ್ ನಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು.
ಈ ಒಂದು ಉತ್ತಮ ಕಾರ್ಯದಲ್ಲಿ ಕೆ.ಸಿ.ಎಫ್ ನೊಂದಿಗೆ ಸಹಕರಿಸಿದ ಮ್ರತರ ಕುಟುಂಬದವರಾದ ಆಸಿಫ್ ಹಾಗು ಝೋನ್ ಸಾಂತ್ವನ ಕನ್ವೀನರ್ ಬಾಷಾ ಗಂಗಾವಲಿ, ರಾಷ್ಟ್ರೀಯ ಸಾಂತ್ವನ ಚೇರ್ಮಾನ್ ಮಹಮ್ಮದ್ ಮಲಬೆಟ್ಟು ಇವರುಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಮ್ರತರ ಕುಟುಂಬದವರು, ಗೆಳೆಯರು ಹಾಗು ಕೆ.ಸಿ.ಎಫ್ ನಾಯಕರು ಅಂತ್ಯಕ್ರೀಯೆಯಲ್ಲಿ ಭಾಗಿಯಾಗಿ ಮ್ರತರಿಗಾಗಿ ದುಆ ನೆರೆವೇರಿಸಲಾಯಿತು.
ವರದಿ:ತಮೀಮ್ ಕೂಳೂರು