janadhvani

Kannada Online News Paper

ನೇಪಾಳ ಮೂಲಕ ಸೌದಿ ಪ್ರಯಾಣ ಅಸಾಧ್ಯ- ವಲಸಿಗರು ಸಂಕಷ್ಟದಲ್ಲಿ

ನೇಪಾಳದ ಮೂಲಕ ಪ್ರಯಾಣಿಸುವ ವಿದೇಶಿಯರಿಗೆ ಕೋವಿಡ್ ಪಿಸಿಆರ್ ಪರೀಕ್ಷೆಯನ್ನು ಸ್ಥಗಿತಗೊಳಿಸುವಂತೆ ಪ್ರಯೋಗಾಲಯಗಳಿಗೆ ನೇಪಾಳದ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.ಹೊಸ ನಿಯಂತ್ರಣ ನಿನ್ನೆ ಸಂಜೆ ಜಾರಿಗೆ ಬಂದಿದೆ.

ಈ ನಿರ್ಧಾರವು ನೇಪಾಳ ಮೂಲಕ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ವಲಸಿಗರಿಗೆ ಹಿನ್ನಡೆಯಾಗಲಿದೆ. ಏತನ್ಮಧ್ಯೆ, ಶಾರ್ಜಾ ಇಮಿಗ್ರೇಷನ್ ಭಾರತದಿಂದ ಬರುವವರಿಗೆ ಸಂದರ್ಶಕ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ. ಆದರೆ ದುಬೈ ಸೇರಿದಂತೆ ಇತರ ಎಮಿರೇಟ್‌ಗಳಲ್ಲಿ ವೀಸಾ ಪಡೆಯಲು ಯಾವುದೇ ಅಡೆತಡೆಗಳಿಲ್ಲ.

ಅದೇ ಸಮಯದಲ್ಲಿ, ನಾಲ್ಕು ಕೊಲ್ಲಿ ರಾಷ್ಟ್ರಗಳು ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದರಿಂದ ಸಾವಿರಾರು ಜನರು ವಲಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತದಲ್ಲಿ ಕೋವಿಡ್ ಹರಡುವಿಕೆಯು ನಿಯಂತ್ರಣಕ್ಕೆ ಬರದೇ ಇರುವುದರಿಂದ ನಿಷೇಧವು ಅನಿರ್ದಿಷ್ಟವಾಗಿ ಮುಂದುವರಿಯುತ್ತದೆ ಎಂಬ ಕಳವಳವೂ ಹೆಚ್ಚಾಗಿದೆ.

ಇತ್ತೀಚಿನ ದಿನಗಳಲ್ಲಿ ಯುಎಇ, ಕುವೈತ್ ಮತ್ತು ಒಮಾನ್ ಭಾರತದಿಂದ ಬರುವ ವಿಮಾನಗಳ ಮೇಲೆ ಸಂಪೂರ್ಣ ನಿಷೇಧ ಹೇರಿವೆ. ಇದರೊಂದಿಗೆ ದೇಶದಲ್ಲಿ ರಜೆಯಲ್ಲಿದ್ದ ಸಾವಿರಾರು ವಲಸಿಗರು ಸಿಲುಕಿದ್ದಾರೆ. ನಿಷೇಧ ತೆರವುಗೊಂಡು ಮರಳುವಿಕೆ ಸಾಧ್ಯವಾಗುವುದು ಯಾವಾಗ ಎಂಬ ಆತಂಕವು ವಲಸಿಗ ಭಾರತೀಯರಲ್ಲಿ ಮನೆಮಾಡಿದೆ.

error: Content is protected !! Not allowed copy content from janadhvani.com