ಕುವೈತ್ ಸಿಟಿ: ಕುವೈತ್ ಭಾರತದ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ ಹೇರಿದೆ.ದೇಶದಿಂದ ವಿಮಾನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಶೇಷ ವಿಮಾನಗಳನ್ನೂ ಕುವೈತ್‌ಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಭಾರತದಲ್ಲಿ ಕೋವಿಡ್ ಹರಡುವಿಕೆಯು ನಿಯಂತ್ರಣದಲ್ಲಿಲ್ಲದ ಕಾರಣ ಕುವೈತ್ ಪ್ರಯಾಣ ನಿಷೇಧವನ್ನು ಘೋಷಿಸಿದೆ.
ಭಾರತವನ್ನು ಹೊರತುಪಡಿಸಿ, ಇತರ 33 ದೇಶಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ಆದರೆ, ಆರೋಗ್ಯ ಕಾರ್ಯಕರ್ತರು, ಗೃಹ ಕಾರ್ಮಿಕರು ಮತ್ತು ರಾಜತಾಂತ್ರಿಕರಿಗೆ ವಂದೇ ಭಾರತ್ ಸೇವೆಯ ಮೂಲಕ ಕುವೈತ್ ಪ್ರವೇಶಿಸಲು ಅವಕಾಶ ನೀಡಲಾಗಿತ್ತು ಅದನ್ನೂ ನಿಶೇಧಿಸಿ ಹೊಸ ಆದೇಶ ಹೊರಡಿಸಲಾಗಿದೆ.
ಮುಂದಿನ ಸೂಚನೆ ಬರುವವರೆಗೂ ನಿಷೇಧವು ಜಾರಿಯಲ್ಲಿರುತ್ತದೆ. ಯುಎಇ ಮತ್ತು ಒಮಾನ್‌ನಿಂದಲೂ ಪ್ರಯಾಣ ನಿಷೇಧ ಇಂದಿನಿಂದ ಮತ್ತೆ ಜಾರಿಗೆ ಬರಲಿದೆ.