ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಪಿಡುಗು ಅನಿಯಂತ್ರಿತವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕೈಗೊಂಡ ಕಠಿಣ ಕ್ರಮಗಳನ್ನು ಪಾಲಿಸಲು ರಾಜ್ಯದ ಪ್ರತಿಯೊಬ್ಬರೂ ಬಾಧ್ಯಸ್ಥರು.
ಮುಸಲ್ಮಾನರ ಪಾಲಿಗೆ ರಮ್ಝಾನ್ ತಿಂಗಳು ಅನೇಕ ವಿಶೇಷ ಆರಾಧನೆಗಳನ್ನು ಒಳಗೊಂಡಿದ್ದು ವರ್ಷಕ್ಕೆ ಒಂದು ಬಾರಿ ಮಾತ್ರ ಬರುವ ವಿಶೇಷ ಸಂದರ್ಭವಾಗಿದೆ.
ಈ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ವಿಧಿಸಿರುವ ದಿನಗಳಲ್ಲಿ ಮುಸಲ್ಮಾನರಿಗೆ ಮಸೀದಿಗಳಲ್ಲಿ ರಾತ್ರಿ ತರಾವೀಹ್ ನಮಾಝ್, ಮುಂಜಾನೆ ಫಜ್‌ರ್ ನಮಾಝ್ ಮತ್ತು ಶುಕ್ರವಾರದ ಜುಮಾ ನಮಾಝ್‌ಗಳಿಗೆ ಸರಕಾರದ ಎಲ್ಲ ನಿಯಮ ನಿಯಂತ್ರಣ ಗಳನ್ನು ಪಾಲಿಸಿ ಸರಕಾರ ಅನುಮತಿ ನೀಡಬೇಕೆಂದು ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ಕರ್ನಾಟಕ ರಾಜ್ಯ ಸಮಿತಿ ಮಾನ್ಯ ಕರ್ನಾಟಕ ಮುಖ್ಯಮಂತ್ರಿ ಯೊಂದಿಗೆ ವಿನಂತಿ ಮಾಡಿಕೊಳ್ಳುತ್ತಿದೆ.