ಮಸ್ಕತ್: ಎಲ್ಲಾ ರೀತಿಯ ವೀಸಾ ಹೊಂದಿರುವವರು ಒಮಾನ್‌ಗೆ ಪ್ರವೇಶಿಸಬಹುದು ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ಹೇಳಿದೆ.
ಸುಪ್ರೀಂ ಸಮಿತಿಯು ವೀಸಾ ನಿರ್ಬಂಧಗಳನ್ನು ಘೋಷಿಸುವ ಮುಂಚಿತವಾಗಿ ಅನುಮತಿ ಪಡೆದ ವೀಸಾ ಹೊಂದಿರುವವರಿಗೆ ಪ್ರವೇಶ ಸಾಧ್ಯ. ಕೆಲಸ, ಕುಟುಂಬ,ಸಂದರ್ಶಕ, ಎಕ್ಸ್‌ಪ್ರೆಸ್ ಮತ್ತು ಪ್ರವಾಸಿ ವೀಸಾಗಳು ಸೇರಿದಂತೆ ಎಲ್ಲಾ ವೀಸಾ ಹೊಂದಿರುವವರಿಗೆ ಪ್ರವೇಶ ಮುಕ್ತವಾಗಿರುತ್ತದೆ.
ನಾಗರಿಕ ವಿಮಾನಯಾನ ಪ್ರಾಧಿಕಾರವು ಒಮಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿ ಮಾನ್ಯತೆ ಇರುವ ವೀಸಾ ಹೊಂದಿರುವ ಎಲ್ಲಾ ವಿದೇಶಿಯರಿಗೆ ಪ್ರವೇಶ ಸಾಧ್ಯ ಎಂದು ತಿಳಿಸಿದೆ. ಏತನ್ಮಧ್ಯೆ, ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ ಒಮಾನ್ನಲ್ಲಿ ಎಲ್ಲಾ ಹೊಸ ವೀಸಾಗಳ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.