ರಿಯಾದ್: ಕೋವಿಡ್ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ರಾಷ್ಟ್ರೀಯ ವಿಮಾನಯಾನ ಕಂಪನಿಯಾದ ಸೌದಿಯಾ ರದ್ದುಗೊಳಿಸಿರುವ ಅಂತರರಾಷ್ಟ್ರೀಯ ಸೇವೆಗಳನ್ನು ಮುಂದಿನ ತಿಂಗಳು ಪುನರಾರಂಭಿಸುವುದಾಗಿ ಸೌದಿ ಸಾರಿಗೆ ಸಚಿವರು ಘೋಷಿಸಿದ್ದಾರೆ. ಸೇವೆಯನ್ನು ಪ್ರಾರಂಭಿಸುವ ಮುನ್ನ ಸಿದ್ಧತೆಗಳು ನಡೆಯುತ್ತಿವೆ ಎಂದು ಸಾರಿಗೆ ಸಚಿವ ಸಾಲಿಹ್ ಅಲ್-ಜಾಸರ್ ಅವರು ಹೇಳಿದರು.
ಪ್ರಸ್ತುತ, ಸೌದಿ ಅರೇಬಿಯಾಕ್ಕೆ ಪ್ರವೇಶ ನಿಷೇಧವನ್ನು ಮೇ 17 ರ ವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಮೇ 17 ರಂದು ದೇಶವು ಸಹಜ ಸ್ಥಿತಿಗೆ ಮರಳಲಿದೆ ಎಂದು ಗೃಹ ಸಚಿವಾಲಯ ತಿಳಿಸಿತ್ತು.
ಕೋವಿಡ್ ವಿಸ್ತರಣೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮಾರ್ಚ್ 2020 ರಲ್ಲಿ ಸೌದಿ ಏರ್ಲೈನ್ಸ್ ತನ್ನ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿತು. ಕೋವಿಡ್ ಹತೋಟಿಗೆ ಬಂದ ನಂತರ ದೇಶೀಯ ಸೇವೆಗಳನ್ನು ಪುನರಾರಂಭಿಸಲಾಯಿತು, ಆದರೆ ಅಂತರರಾಷ್ಟ್ರೀಯ ಸೇವೆಗಳು ಇನ್ನೂ ಪ್ರಾರಂಭಿಸಲಿಲ್ಲ.
ಆದರೆ ಇದೀಗ ತನ್ನ ಅಂತಾರಾಷ್ಟ್ರೀಯ ಸೇವೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದು, ಭಾರತ ಒಳಗೊಂಡಂತೆ ಕೋವಿಡ್ ಏಕಾಏಕಿ ಹೆಚ್ಚುತ್ತಿರುವ ದೇಶಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.