ಲಖನೌ, ಏಪ್ರಿಲ್, 14: ಉತ್ತರ ಪ್ರದೇಶದ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಉಭಯ ಮುಖಂಡರ ಕೋವಿಡ್ ಪರೀಕ್ಷಾ ಫಲಿತಾಂಶ ಬುಧವಾರ ಹೊರಬಂದಿದೆ.
ಈ ಕುರಿತು ಯೋಗಿ ಆದಿತ್ಯನಾಥ್ “ಆರಂಭಿಕ ರೋಗಲಕ್ಷಣಗಳು ಕಂಡುಬಂದ ನಂತರ, ಸೋಂಕು ಪತ್ತೆ ಪರೀಕ್ಷೆಗೆ ಒಳಪಟ್ಟಿದ್ದು, ಧನಾತ್ಮಕವಾಗಿದೆ. ಪ್ರಸ್ತುತ ಪ್ರತ್ಯೇಕವಾಗಿದ್ದು, ವೈದ್ಯರ ಸಲಹೆ ಅನುಸರಿಸುತ್ತಿದ್ದೇನೆ.ಎಲ್ಲ ಕೆಲಸ ಕಾರ್ಯಗಳನ್ನೂ ವರ್ಚುವಲ್ ಆಗಿ ನಡೆಸುತ್ತಿರುವೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಪರೀಕ್ಷೆಗೆ ಒಳಗಾಗಬೇಕು ಮತ್ತು ಮುನ್ನೆಚ್ಚರಿಕೆ ವಹಿಸಬೇಕು ”ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, “ಇದೀಗ ನನ್ನ ಕೊರೋನಾ ಪರೀಕ್ಷಾ ವರದಿ ಕೈಸೇರಿದ್ದು, ಧನಾತ್ಮಕವಾಗಿದೆ. ನಾನು ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ ಮತ್ತು ಮನೆಯಲ್ಲಿಯೇ ಚಿಕಿತ್ಸೆ ಪ್ರಾರಂಭವಾಗಿದೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರು, ಪರೀಕ್ಷೆಗೆ ಒಳಡುವಂತೆ ವಿನಂತಿಸುವೆ” ಎಂದು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ಬಹಳ ಉತ್ತಮ ವರದಿ