ಕುವೈತ್ ಸಿಟಿ: ಕುವೈತ್‌ನ ಮಸೀದಿಗಳಲ್ಲಿ ರಂಜಾನ್ ತರಾವೀಹ್ ಪ್ರಾರ್ಥನೆ ನಡೆಸಲು ಅವ್ಕಾಫ್ ಸಚಿವಾಲಯ ಅನುಮತಿ ನೀಡಿದೆ. ಕೋವಿಡ್ ಸನ್ನಿವೇಶದಲ್ಲಿ,ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅವ್ಕಾಫ್ ಹೇಳಿದೆ.
ಇದನ್ನು ಆಕ್ವಾಫ್ ಸಚಿವಾಲಯದ ಅಂಡರ್ ಸೆಕ್ರೆಟರಿ ಫರೀದ್ ಅಲ್ ಇಮಾದಿ ಪ್ರಕಟಿಸಿದ್ದಾರೆ. ಪವಿತ್ರ ರಂಜಾನ್ ತಿಂಗಳನ್ನು ಸ್ವಾಗತಿಸಲು ಸಚಿವಾಲಯವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅವರು ಹೇಳಿದರು.
ಸಾಮಾಜಿಕ ಅಂತರ ಒಳಗೊಂಡಂತೆ ಭದ್ರತಾ ಮಾನದಂಡಗಳನ್ನು ಪಾಲಿಸಬೇಕಾದ ಕಾರಣ ಮಸೀದಿಗಳಲ್ಲಿನ ಮಹಿಳಾ ಪ್ರಾರ್ಥನಾ ಕೊಠಡಿಗಳನ್ನೂ ಪುರುಷರಿಗಾಗಿ ತೆರೆದಿರುವುದು.ಮಹಿಳೆಯರಿಗೆ ಪ್ರವೇಶಾನುಮತಿ ಇಲ್ಲ.