ಬೆಂಗಳೂರು: ಇಂದು 1 ರಿಂದ 9ರ ವರೆಗಿನ ತರಗತಿ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಮಹತ್ವದ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ಖಾಸಗಿ ಶಾಲಾ ಒಕ್ಕೂಟಗಳು ಪರೀಕ್ಷೆ ನಡೆಸಬೇಕು ಅಂತ ಒತ್ತಡ ಹಾಕಿದ್ರೆ , ಪೋಷಕರು ಪರೀಕ್ಷೆ ಬೇಡವೇ ಬೇಡ ಅಂತ ಸರ್ಕಾರಕ್ಕೆ ತಿಳಿಸಿದೆ. ಇದರ ನಡುವೆ ಸಿಲುಕಿಕೊಂಡ ಶಿಕ್ಷಣ ಇಲಾಖೆ ಇನ್ನೆರಡು ದಿನದಲ್ಲಿ ಪರೀಕ್ಷೆ ನಡೆಸಬೇಕೋ ಬೇಡ್ವೋ ಎಂಬ ನಿರ್ಧಾರ ತೆಗೆದುಕೊಳ್ಳಲಿದೆ.
ಪರೀಕ್ಷೆ ಬೇಕೋ ಬೇಡವೋ ಅನ್ನೋ ವಿಚಾರಕ್ಕೆ ಸಂಬಂಧಿಸಿ ಸಭೆಗೆ ಇವತ್ತು ಪೋಷಕ ಪ್ರತಿನಿಧಿಗಳು, ಖಾಸಗಿ ಶಾಲಾ ಒಕ್ಕೂಟಗಳು, ಶಿಕ್ಷಣ ತಜ್ಞರು , ಇಲಾಖೆಯ ಅಧಿಕಾರಿ ಗಳೊಂದಿಗೆ ಸುರೇಶ್ ಕುಮಾರ್ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಕಲೆ ಹಾಕಿದರು. ಬಳಿಕ ಪರೀಕ್ಷೆ ವಿಚಾರ ಇನ್ನೆರಡು ದಿನದಲ್ಲಿ ಅಂತಿಮ ತೀರ್ಮಾನ ತಿಳಿಸುತ್ತೇವೆ. ಸಿಎಂ ಬಳಿ ಈ ಕುರಿತು ಚರ್ಚೆ ಮಾಡುತ್ತೇವೆ ಎಂದರು.
ಸಭೆಯಲ್ಲಿ ಖಾಸಗಿ ಶಾಲಾ ಒಕ್ಕೂಟಗಳಾದ ಕ್ಯಾಮ್ಸ್ , ಹಾಗೂ ರುಪ್ಸಾ ಕರ್ನಾಟಕ ಪರೀಕ್ಷೆ ನಡೆಸಲೆಬೇಕು ಅಂತ ಒತ್ತಾಯ ಮಾಡಿದೆ. ಪರೀಕ್ಷೆ ನಡೆಸಲು ಸಾದ್ಯವೇ ಇಲ್ಲ ಅನ್ನೊ ಪಕ್ಷದಲ್ಲಿ ಕನಿಷ್ಠ ಪಕ್ಷ 1 ರಿಂದ 5ರವರೆಗೆ ಆನ್ ಲೈನ್ ಪರೀಕ್ಷೆ ಮಾಡಿ , ಪರೀಕ್ಷೆ ಇಲ್ಲದೇ ಪಾಸ್ ಮಾಡಿದ್ರೆ ತಾರತಮ್ಯ ಮಾಡಿದಂತೆ ಆಗುತ್ತೆ. ಮಕ್ಕಳು ಖಿನ್ನತೆ ಒಳಾಗಾಗುತ್ತಾರೆ ಅಂತ ತಿಳಿಸಿದ್ರು. ಇನ್ನೂ ಉಳಿದ 6 ರಿಂದ 9 ನೇ ತರಗತಿಗೆ ಶಿಫ್ಟ್ ಆಧಾರಸಲ್ಲಿ ಪರೀಕ್ಷೆ ನಡೆಸುವಂತೆ ಸಲಹೆ ನೀಡಿದೆ.
ಶಿಕ್ಷಣ ಒಕ್ಕೂಟಗಳು ಪರೀಕ್ಷೆ ಬೇಕು ಅಂತ ಪಟ್ಟು ಹಿಡಿದ್ರೆ , ಪೋಷಕರು ಈ ಬಾರಿ ಕ್ಲಾಸ್ ಗಳೇ ಸರಿಯಾಗಿ ನಡೆದಿಲ್ಲ ಅನ್ ಲೈನ್ ಪಾಠ ಕೇಳಿ ಆಫ್ ಲೈನ್ ಪರೀಕ್ಷೆ ಎದುರಿಸೋದು ಕಷ್ಟ ಆಗುತ್ತೆ . ಹೀಗಾಗಿ ಈ ವರ್ಷ ಪರೀಕ್ಷೆ ಅನ್ನೋ ಪದವೇ ಬೇಡಾ ಬೇರೆ ಮಾರ್ಗದಲ್ಲಿ ಮೌಲ್ಯಾಂಕನ ಮಾಡಿ , ಪರೀಕ್ಷೆ ನಡೆಸಿದ್ರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತೆ ಹಳೆ ವರಸೆಯನ್ನು ಶುರು ಮಾಡುತ್ತವೆ. ಮಕ್ಕಳಿಗೆ ಕೂಡ ಶೋಷಣೆ ಯಾಗುತ್ತೆ ಶಿಕ್ಷಣ ಎಲ್ಲರ ಹಕ್ಕು ಎಂದರು.
ಒಟ್ಟಿನಲ್ಲಿ ಕೇವಲ 2 ತಿಂಗಳು ಮಾತ್ರ ಅರ್ಧಂ ಬರ್ದ ಭೌತಿಕ ಕ್ಲಾಸ್ ಕೇಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ರೆ, ಇತ್ತ ಪೋಷಕರಿಗೆ ಪರೀಕ್ಷೆ ಹೆಸರಲ್ಲಿ ಮತ್ತೆ ಪೀಸ್ ಟಾರ್ಚರ್ ಎಲ್ಲಿ ಎದುರಾಗುತ್ತೊ ಅನ್ನೊ ಭಯದಲ್ಲಿದ್ದಾರೆ. ಇಬ್ಬರ ನಡುವೆ ಸಿಲುಕಿಕೊಂಡ ಶಿಕ್ಷಣ ಇಲಾಖೆ ಈಗ ಪಾರದರ್ಶಕ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆ ಇದೆ. ಅದೇನೇ ಆಗ್ಲಿ ಪರೀಕ್ಷೆ ಹೆಸರಲ್ಲಿ ಫೀಸ್ ಅಂತ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಒತ್ತಡ ಆಗದಿರಲಿ ಅನ್ನೋದೇ ನಮ್ಮ ಆಶಯ.